ಫೇಸ್​ ಬುಕ್​, ವಾಟ್ಸಾಪ್ ಸ್ಥಗಿತ| ಟೆಲಿಗ್ರಾಂಗೆ 70 ಮಿಲಿಯನ್ ಹೊಸ ಗ್ರಾಹಕರ ಸೇರ್ಪಡೆ!

Prasthutha|

ಹೊಸದಿಲ್ಲಿ: ಫೇಸ್ ​ಬುಕ್​​ , ವಾಟ್ಸಾಪ್​ ಹಾಗೂ ಇನ್​ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯವಾದ ದಿನದಂದು ಟೆಲಿಗ್ರಾಂಗೆ ಬರೋಬ್ಬರಿ 70 ಮಿಲಿಯನ್​ ಹೊಸ ಬಳಕೆದಾರರು ಸೇರ್ಪಡೆಯಾಗಿದ್ದಾರೆ.

- Advertisement -

ಫೇಸ್ ​ಬುಕ್​, ವಾಟ್ಸಾಪ್​ ಹಾಗೂ ಇನ್​ಸ್ಟಾಗ್ರಾಂ ಸೇವೆಗಳಲ್ಲಿ 6 ಗಂಟೆಗಳ ಕಾಲ ವ್ಯತ್ಯಯ ಕಂಡು ಬಂದ ಹಿನ್ನೆಲೆಯಲ್ಲಿ ಟೆಲಿಗ್ರಾಂಗೆ 70 ಮಿಲಿಯನ್​ ಹೊಸ ಬಳಕೆದಾರರ ಸೇರ್ಪಡೆಯಾಗಿದೆ ಎಂದು ಟೆಲಿಗ್ರಾಂ ಸ್ಥಾಪಕ ಪಾವೆಲ್ ಡುರೊವ್ ಹೇಳಿದ್ದಾರೆ. ನಾವು ಒಂದೇ ದಿನದಲ್ಲಿ 70 ಮಿಲಿಯನ್​ ಇತರೆ ಸಾಮಾಜಿಕ ಜಾಲತಾಣಗಳ ಬಳಕೆದಾರರನ್ನು ಸ್ವಾಗತಿಸಿದ್ದೇವೆ ಎಂದು ಅವರು​ ತಮ್ಮ ಟೆಲಿಗ್ರಾಂ ಚಾನೆಲ್​ನಲ್ಲಿ ತಿಳಿಸಿದ್ದಾರೆ.

 ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದ ಬಳಿಕವೂ ನಮ್ಮ ತಂಡ ಯಾವುದೇ ದೋಷವಿಲ್ಲದೇ ಕಾರ್ಯ ನಿರ್ವಹಿಸಿದೆ. ಈ ಮೂಲಕ ಈ ಅಭೂತಪೂರ್ವ ಬೆಳವಣಿಗೆಯನ್ನು ಸ್ವಾಗತಿಸಿದೆ. ಪ್ರಪಂಚದ ವಿವಿಧ ಭಾಗಗಳಿಂದ ಮಿಲಿಯನ್​ಗಟ್ಟಲೇ ಬಳಕೆದಾರರು ಏಕಕಾಲದಲ್ಲಿ ಟೆಲಿಗ್ರಾಂಗೆ ಸೈನಪ್​ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.



Join Whatsapp