32 ವರ್ಷ ಹಳೆಯ ಅಪಹರಣ ಪ್ರಕರಣದಲ್ಲಿ ಪಪ್ಪು ಯಾದವ್ ಖುಲಾಸೆ!

Prasthutha|

ಪಾಟ್ನಾ: ಮಾಜಿ ಸಂಸದ ಹಾಗೂ ಜನ್ ಅಧಿಕಾರ್ ಪಕ್ಷದ ಸಂಸ್ಥಾಪಕ ಪಪ್ಪು ಯಾದವ್ ಅವರನ್ನು 32 ವರ್ಷಗಳ ಹಳೆಯ ಅಪಹರಣ ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.

- Advertisement -

ಸಾಕ್ಷಿಯ ಕೊರತೆಯ ಕಾರಣದಿಂದ ಮಾಧೇಪುರ ವಿಶೇಷ ನ್ಯಾಯಾಲಯವು ಪಪ್ಪು ಯಾದವ್ ಅವರನ್ನು ಖುಲಾಸೆಗೊಳಿಸಿದೆ. 1989 ರಲ್ಲಿ ಮಾಧೇಪುರದ ಮುರಳಿ ಖಂಜ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರ್ಷ ಮೇ 11 ರಂದು ಅವರನ್ನು ಬಂಧಿಸಲಾಗಿತ್ತು.

ಪಪ್ಪು ಯಾದವ್ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ಅವರನ್ನು ಖುಲಾಸೆಗೊಳಿಸಲಾಗುವುದು ಎಂದು ನ್ಯಾಯಾಧೀಶ ನಿಶಿಕಾಂತ್ ಠಾಕೂರ್ ತೀರ್ಪು ನೀಡಿದ್ದಾರೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ಪಪ್ಪು ಯಾದವ್, ನ್ಯಾಯ ವಿಳಂಬವಾಗಬಹುದು ಆದರೆ ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರಾಮ್ ಕುಮಾರ್ ಯಾದವ್ ಮತ್ತು ಉಮಾಶಂಕರ್ ಯಾದವ್ ಅವರನ್ನು ಪಪ್ಪು ಯಾದವ್ ಅಪಹರಿಸಿದ್ದಾರೆ ಎಂದು ಆರೋಪಿಸಿ ಶೈಲೇಂದ್ರ ಯಾದವ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು.

 ಈ ವರ್ಷದ ಮೇನಲ್ಲಿ ಬಂಧನಕ್ಕೊಳಗಾಗಿದ್ದ ಯಾದವ್‌ರನ್ನು ಸುಪೋಲ್ ಜಿಲ್ಲೆಯ ಬೀರಪುರ ಜೈಲಿನಲ್ಲಿ ಇರಿಸಲಾಗಿತ್ತು. ಜೈಲಿನ ಅಧಿಕಾರಿಗಳು ತನಗೆ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಅವರು ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಈ ವರ್ಷ ಜೂನ್ 1 ರಂದು ಮಾಧೇಪುರ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಯಾದವ್‌ಗೆ ಜಾಮೀನು ನಿರಾಕರಿಸಿತ್ತು.



Join Whatsapp