ಸ್ಟಾಕ್ ಹೋಮ್: ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿಗೆ ಅಮೆರಿಕದ ವಿಜ್ಞಾನಿಗಳಾದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೂಟಿಯನ್ ಅವರು ಪಾತ್ರರಾಗಿದ್ದಾರೆ.
ಪ್ರಶಸ್ತಿಯು ಚಿನ್ನದ ಪದಕ ಹಾಗೂ 10 ಮಿಲಿಯನ್ ಸ್ವೀಡಿಷ್ ಕ್ರೋನರ್ (8.50 ಕೋಟಿ ರೂ.) ಒಳಗೊಂಡಿದೆ.ಇದು 2021ನೇ ಸಾಲಿನ ಪ್ರಶಸ್ತಿಯಾಗಿದೆ.
ʻಚರ್ಮದಲ್ಲಿನ ಸ್ಪರ್ಶ ಹಾಗೂ ತಾಪಮಾನ ಗ್ರಹಿಕಾ ವ್ಯವಸ್ಥೆʼ ಕುರಿತು ಈ ಇಬ್ಬರು ವಿಜ್ಞಾನಿಗಳು ನಡೆಸಿದ ಸಂಶೋಧನೆಗೆ ಈ ಪ್ರಶಸ್ತಿ ಲಭಿಸಿದೆ.
ಇವರಿಬ್ಬರೂ ʻನರ ಪ್ರಚೋದನೆಗಳ ಮೂಲಕ ಮಾನವರು ತಾಪಮಾನ ಮತ್ತು ಒತ್ತಡವನ್ನು ಹೇಗೆ ಗ್ರಹಿಸುತ್ತಾರೆ ಎಂಬ ವಿಚಾರವನ್ನು ಸಂಶೋಧನೆ ಮೂಲಕ ನಿರೂಪಿಸಿದ್ದಾರೆ.