ನವೆಂಬರ್ ನಿಂದ ಅದಾನಿ ಸಂಸ್ಥೆಗೆ ಮಂಗಳೂರು ವಿಮಾನ ನಿಲ್ದಾಣ ಮೇಲ್ವಿಚಾರಣೆ

Prasthutha|

ಮಂಗಳೂರು: 69 ವರ್ಷಗಳಿಂದ ಸರಕಾರದ ಅಧೀನದಲ್ಲಿದ್ದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ನವೆಂಬರ್ 15ರೊಳಗಾಗಿ ಅದಾನಿ ಸಮೂಹ ಸಂಸ್ಥೆ ವಹಿಸಿಕೊಳ್ಳಬೇಕಾಗಿದೆ.

- Advertisement -

ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣ ಗೊಳಿಸಿದ ಬಳಿಕ ನವೆಂಬರ್ 1ರಿಂದ ವಿಮಾನ ನಿಲ್ದಾಣದ ಮೇಲ್ವಿಚಾರಣೆಯನ್ನು ಅದಾನಿಗೆ ನೀಡಲಾಗುವುದೆಂದು ವಿಮಾನ ನಿಲ್ದಾಣ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಮೊದಲ ಒಂದು ವರ್ಷ ಅದಾನಿ ಸಂಸ್ಥೆ ಮತ್ತು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರಗಳು ಜಂಟಿಯಾಗಿ ಕಾರ್ಯಾಚರಿಸಲಿವೆ. ಟರ್ಮಿನಲ್ ಕಟ್ಟಡದಲ್ಲಿ ರುವ ವಾಣಿಜ್ಯ ಚಟುವಟಿಕೆ, ಹೂಡಿಕೆ, ಲಾಭ-ನಷ್ಟಗಳ ಲೆಕ್ಕಚಾರ, ವಿಮಾನಯಾನ ಸಂಸ್ಥೆಗಳು ನೀಡುವ ಬಾಡಿಗೆ ಮುಂತಾದವುಗಳನ್ನು ಅದಾನಿ ನೋಡಿಕೊಳ್ಳಲಿದೆ. ವಿಮಾನ ಯಾನ ಪ್ರಾಧಿಕಾರವು  ವಿಮಾನಗಳ ಆಗಮನ, ನಿರ್ಗಮನವನ್ನು ನೋಡಿಕೊಳ್ಳಲಿದ್ದು ಅದಾನಿ ಸಂಸ್ಥೆಗೆ ಈ ಕುರಿತು ತರಬೇತಿ ನೀಡಲಿದೆ.

- Advertisement -

ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ವಹಿಸಿಕೊಳ್ಳಲಿದ್ದರೂ ಹೊಸ ಉದ್ಯೋಗ ನೆಮಕಾತಿ ಮಾಡಲಾಗುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. ಟರ್ಮಿನಲ್ ಕಟ್ಟಡದ ಬಾಡಿಗೆಯಲ್ಲಿ  ಬದಲಾವಣೆಗಳಾಗುವ ಸಾಧ್ಯತೆ ಇದೆ.



Join Whatsapp