ಬೀದರ್: ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೀರು ಪಾಲಾಗಿರುವ ದಾರುಣ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಘೋಡಾವಾಡಿಯ ದರ್ಗಾ ಕೆರೆಯಲ್ಲಿ ನಡೆದಿದೆ.
ಮೊಹಮ್ಮದ್ ಜುಲೇದ್ ಖಾನ್ (19), ಸಲೀಂ ಖಾನ್ (18), ಅಕ್ಬರ್ ಸೈಯದ್ (17), ಸೈಯದ್ (15) ನೀರುಪಾಲದ ದುರ್ದೈವಿಗಳು. ಮೃತರು ಹೈದರಾಬಾದ್ ನಗರದ ಬೊರಾಬಂಡಾ ನಿವಾಸಿಗಳಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮೃತದೇಹಕ್ಕಾಗಿ ಶೋಧ ನಡೆಸಿದ್ದಾರೆ.