ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ ಅಮೀರ್ ಖಾನ್ ಕಾರಣ: ಕಂಗನಾ ಗಂಭೀರ ಆರೋಪ

Prasthutha|

ಮುಂಬೈ: ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ವಿಚ್ಛೇದನಕ್ಕೆ ಬಾಲಿವುಡ್ ನಟ ಅಮೀರ್ ಖಾನ್ ಕಾರಣ ಎಂದು ನಟಿ ಕಂಗನಾ ರಣಾವತ್ ಗಂಭೀರ ಆರೋಪ ಮಾಡಿದ್ದಾರೆ.

- Advertisement -


ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣ ಏನು ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದುಕೊಂಡಿದೆ. ಇಂತಹ ಸಂದರ್ಭದಲ್ಲಿ ಕಂಗನಾ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.


ವಿಚ್ಛೇದನ ವಿಷಯದಲ್ಲಿ ನೂರರಲ್ಲಿ ಒಬ್ಬ ಮಹಿಳೆಯ ತಪ್ಪು ಇರಬಹುದು, ಆದರೆ ಬಹುತೇಕ ಸಂದರ್ಭಗಳಲ್ಲಿ ತಪ್ಪು ಪುರುಷರದ್ದೇ. ಮಹಿಳೆಯರನ್ನು ಬಟ್ಟೆಯಂತೆ ಬದಲಾಯಿಸುವ ಮತ್ತು ನಂತರ ಅವರು ಉತ್ತಮ ಸ್ನೇಹಿತರೆಂದು ಹೇಳಿಕೊಳ್ಳುವ ಇಂತವರಿಗೆ ದಯೆ ತೋರಿಸುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.

- Advertisement -


ಸಮಂತಾ ಹಾಗೂ ನಾಗಚೈತನ್ಯ ಬೇರೆಯಾಗುತ್ತಿರುವುದಕ್ಕೆ ಕಾರಣ ಡಿವೋರ್ಸ್ ಎಕ್ಸ್ ಪರ್ಟ್ ಅಮೀರ್ ಖಾನ್ . ನಾಗಚೈತನ್ಯ ಅವರು ಅಮೀರ್ ಖಾನ್ ಜೊತೆಗೆ ನಿಕಟವಾದ ಕೂಡಲೇ ಈ ವಿಚ್ಛೇದನ ನಡೆದಿದೆ ಎಂದು ಟೀಕಿಸಿದ್ದಾರೆ. ಇನ್ನು ನಾಗಚೈತನ್ಯ ಅವರು ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Join Whatsapp