ಜಲ ಸಮಾಧಿ ಆಗುತ್ತೇನೆ ಎಂದಿದ್ದ ಸ್ವಾಮಿ | ಗಡುವು ಮುಕ್ತಾಯವಾಗುತ್ತಲೇ ಟ್ವಿಟ್ಟರ್ ನಲ್ಲಿ ಕಾಲೆಳೆದ ನೆಟ್ಟಿಗರು

Prasthutha|

ನವದೆಹಲಿ: ಭಾರತವನ್ನು ಹಿಂದೂ ರಾಷ್ಟ್ರ ಎಂದು ಕೇಂದ್ರ ಸರ್ಕಾರ ಘೋಷಿಸದಿದ್ದರೆ ಶನಿವಾರ(ಅಕ್ಟೋಬರ್ 02) ಅಯೋಧ್ಯೆಯ ಸರಯೂ ನದಿಯಲ್ಲಿ ಜಲ ಸಮಾಧಿಯಾಗುವುದಾಗಿ ಹೇಳಿದ್ದಪರಮಹಂಸ ಆಚಾರ್ಯ ಮಹಾರಾಜ್ ವಿರುದ್ಧ ನೆಟ್ಟಿಗರು ಕಾಲೆಳೆದಿದ್ದಾರೆ.

- Advertisement -


ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಾರಾಜ್, ನಾನು ಜಲಸಮಾಧಿ ಆಗುತ್ತೇನೆ ಎಂದು ಸರ್ಕಾರ ನನ್ನನ್ನು ಗೃಹ ಬಂಧನದಲ್ಲಿ ಇಟ್ಟಿದೆ. ಬಿಡುಗಡೆ ಮಾಡಿದರೆ ತಾನು ಜಲ ಸಮಾಧಿ ಆಗುತ್ತೇನೆ. ಆದರೂ ನಾನು ಸರಯೂ ನದಿಯಿಂದ ನೀರನ್ನು ತಂದಿದ್ದೇನೆ. ಹನ್ನೆರೆಡು ಗಂಟೆಗೆ ಇದರಲ್ಲಿ ಮೂಗು ಮುಳುಗಿಸಿ ಜಲಸಮಾಧಿ ಆಗುತ್ತೇನೆ. ಭಗವಂತನ ಇಚ್ಛೆ ಇದ್ದರೆ ಇದರಲ್ಲಿ ಸಫಲನಾಗುತ್ತೇನೆ ಎಂದು ಸಣ್ಣ ನೀರಿನ ಕ್ಯಾನ್‌ ಅನ್ನು ಮಾಧ್ಯಮಗಳಿಗೆ ತೋರಿಸಿದ್ದಾರೆ.

https://twitter.com/man8008s/status/1444244388406722564


ಇದು ಟ್ವಿಟ್ಟರ್ ನಲ್ಲಿ ಭಾರಿ ಟ್ರೆಂಡ್ ಆಗಿದ್ದು ಜನರು ವಿವಿಧ ರೀತಿಯಲ್ಲಿ ವ್ಯಂಗ್ಯವಾಡಿ ಕಾಳೆಲೆದಿದ್ದಾರೆ.



Join Whatsapp