ಮಸ್ಕತ್: ಪ್ರಸಕ್ತ ಒಮಾನ್ ನಲ್ಲಿ ತಲೆದೋರಿರುವ ಭೀಕರ ಚಂಡಮಾರುತದ ಹಿನ್ನೆಲೆಯಲ್ಲಿ ಸರ್ಕಾರ 2 ದಿನ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಸರ್ಕಾರಿ ಕಚೇರಿ, ನ್ಯಾಯಾಲಯ ಮತ್ತು ಖಾಸಗಿ ವಲಯದ ಸಂಸ್ಥೆಯ ಉದ್ಯೋಗಿಗಳಿಗೆ ಈ ರಜೆ ಅನ್ವಯವಾಗಲಿದೆ. ಧೋಫರ್ ಮತ್ತು ಅಲ್ ವುಸ್ತಾ ಎಂಬಲ್ಲಿನ ರಾಜ್ಯಪಾಲರಿಗೆ ರಜೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಒಮಾನ್ ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಅಕ್ಟೋಬರ್ 3 ಮತ್ತು 4 ರಂದು ಸರ್ಕಾರಿ ಆಡಳಿತ ವ್ಯವಸ್ಥೆ, ಖಾಸಗಿ ವಲಯ, ನ್ಯಾಯಾಲಯದ ಉದ್ಯೋಗಿಗಳಿಗೆ ಅಧಿಕೃತವಾಗಿ ರಜೆ ನೀಡಲಾಗಿದೆ.