ಆತ್ಮಹತ್ಯೆ ತಡೆಯಲು ಶಾಲಾ-ಕಾಲೇಜುಗಳಲ್ಲಿ ವಿಶೇಷ ಅರಿವು ಕಾರ್ಯಕ್ರಮ: ಮುಖ್ಯಮಂತ್ರಿ ಬೊಮ್ಮಾಯಿ

Prasthutha|

ಬೆಂಗಳೂರು: ಕೋವಿಡ್ ನಂತರ ಕುಟುಂಬಗಳ ಸಾಮೂಹಿಕ ಆತ್ಮಹತ್ಯೆ ಹೆಚ್ಚಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಅಲ್ಲ. ಎಲ್ಲಾ ಶಾಲೆ, ಕಾಲೇಜು, ಸಾಮಾಜಿಕ ವ್ಯವಸ್ಥೆಯಲ್ಲಿ ಆತ್ಮಹತ್ಯೆ ತಡೆಯುವ ಕ್ರಮ ತೆಗೆದುಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನಸಿಕ ಒತ್ತಡದಿಂದ ಕುಟುಂಬಗಳಲ್ಲಿ ಆತ್ಮಹತ್ಯೆ ಪ್ರಕರಣ ನಡೆಯುತ್ತದೆ. ಸಮಸ್ಯೆ ತಾತ್ಕಾಲಿಕ, ಅದಕ್ಕೆ ಎದೆಗುಂದಬಾರದು. ಸಮಾಜದಲ್ಲಿ ಮಾನಸಿಕ ಒತ್ತಡ ಹಾಗೂ ಬೇರೆ ಕಾರಣಕ್ಕೆ ಆತ್ಮಹತ್ಯೆ ನಡೆಯುತ್ತವೆ. ಇದನ್ನು ತಪ್ಪಿಸುವ ಕೆಲಸ ಸಮಾಜದ ಜತೆಗೂಡಿ ಮಾಡಬೇಕು ಎಂದರು.


ಕುಟುಂಬದಲ್ಲಿ ಪರಸ್ಪರ ಅನ್ಯೋನ್ಯವಾಗಿರಬೇಕು. ಯಾವುದಕ್ಕೂ ಆತ್ಮಹತ್ಯೆ ಪರಿಹಾರವಲ್ಲ. ಯಾವುದೇ ಸಮಸ್ಯೆ ಬಂದರೂ ಆತ್ಮಹತ್ಯೆ ಪರಿಹಾರ ಮಾಡಿಕೊಳ್ಳಬಾರದು. ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕು. ಹಲವಾರು ಆರ್ಥಿಕ, ಸಾಮಾಜಿಕ ಮಾನಸಿಕ ಕ್ಷೋಭೆ ಬಂದಾಗ ಕಷ್ಟ ಆಗಬಹುದು, ಅದಕ್ಕೆ ಎದೆಗುಂದಬಾರದು ಎಂದರು.ಕಾನ್ಸ್ಟಿಟ್ಯೂಷನ್ ಕ್ಲಬ್ ಆರಂಭ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಕ್ಲಬ್ ಆರಂಭದ ಬಗ್ಗೆ ವಿಪಕ್ಷಗಳ ಹಾದಿಯಾಗಿ ಎಲ್ಲರೂ ಸಮ್ಮತಿ ನೀಡಿದ್ದಾರೆ. ಕ್ಲಬ್ ಇದೇ ಮೊದಲ ಬಾರಿಗೆ ಚರ್ಚೆ ಆಗಿಲ್ಲ. ಕಳೆದ 10 ವರ್ಷಗಳಿಂದ ಇದು ಚರ್ಚೆಯಲ್ಲಿದೆ. ಈಗ ಎಲ್ಲ ಒಪ್ಪಿಗೆ ಪಡೆದು ತೀರ್ಮಾನ ಮಾಡಿದ್ದೇವೆ. ಈಗ ತೀರ್ಮಾನ ಮಾಡಿದರೆ ಈಗಲೇ ನಿರ್ಮಿಸುವುದಿಲ್ಲ. ಎಲ್ಲವನ್ನೂ ಪರಿಶೀಲಿಸಿಯೇ ಮುಂದಿನ ಹೆಜ್ಜೆ ಇಡಲಾಗುವುದು ಎಂದರು.
ಕೋವಿಡ್ನಿಂದ ಹಣಕಾಸು ಸಮಸ್ಯೆ ಇದೆ, ಈಗ ಕ್ಲಬ್ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆಗೆ, ಈಗಲೇ ನಿರ್ಮಾಣ ಮಾಡುತ್ತೇವೆ ಎಂದಿಲ್ಲ, ಮುಂದೆ ನೋಡೋಣ ಎಂದು ಮುಖ್ಯಮಂತ್ರಿ ಹೇಳಿದರು



Join Whatsapp