ಪ್ರೀತಿ ನಿರಾಕರಣೆ: ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿಯ ರುಂಡ ಚೆಂಡಾಡಿದ ವಿದ್ಯಾರ್ಥಿ !

Prasthutha|

ಕೊಟ್ಟಾಯಂ: ಪ್ರೀತ್ಸೆ ಪ್ರೀತ್ಸೆ ಎಂದು ಹಿಂದೆ ಬಿದ್ದ ಪಾಗಲ್ ಪ್ರೇಮಿಯೊಬ್ಬ, ಪ್ರೀತಿ ನಿರಾಕರಿಸಿದ ಯುವತಿಯ ರುಂಡವನ್ನು ಕಾಲೇಜು ಆವರಣದಲ್ಲೇ ಕಡಿದ ಅಮಾನುಷ ಘಟನೆ ಕೇರಳದಲ್ಲಿ ನಡೆದಿದೆ.

- Advertisement -

ವೈಕಾಂನ ತಲಯೋಳಪ್ಪರಂಬು ನಿವಾಸಿ 22 ವರ್ಷದ ನಿಥಿನಾ ಮೋಲ್ ಹತ್ಯೆಯಾದ ವಿದ್ಯಾರ್ಥಿನಿ.
ಕೂತಟ್ಟುಕುಲಂನ ಉಪ್ಪಾಣಿ ನಿವಾಸಿಯಾದ ಅಭಿಷೇಕ್ ಬೈಜು ಕೊಲೆ ಮಾಡಿರುವ ಪಾಗಲ್ ಪ್ರೇಮಿ. ನಿಥಿನಾ ಕೊಟ್ಟಾಯಂನ ಸೇಂಟ್ ಥಾಮಸ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ವೋಕೇಷನ್ ‘ ವ್ಯಾಸಂಗ ಮಾಡುತ್ತಿದ್ದಳು.
ಪ್ರೀತಿಸುವಂತೆ ಅಭಿಷೇಕ್ ಪದೇ ಪದೇ ಯುವತಿಗೆ ಕಿರುಕುಳ ನೀಡುತ್ತಿದ್ದ ಆದರೆ ಯುವತಿ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಯುವಕ, ಕಾಲೇಜಿನ ಆವರಣದಲ್ಲಿಯೇ ಆಕೆಯ ತಲೆಯನ್ನು ಕಡಿದು ಕೊಲೆ ಮಾಡಿದ್ದಾನೆ. ಪೊಲೀಸರು ಅಭಿಷೇಕ್ ಬೈಜುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.



Join Whatsapp