ಮಲಪ್ಪುರಂ: ಪ್ರಧಾನಿ ನರೇಂದ್ರ ಮೋದಿ ಜನರ ನಡುವಿನ ಸಂಬಂಧಗಳನ್ನು ಮುರಿದಿದ್ದಾರೆ. ಇದು ಭಾರತದ ಕಲ್ಪನೆಯನ್ನು ಛಿದ್ರಗೊಳಿಸಲು ಕಾರಣವಾಗುತ್ತಿದೆ ಎಂದು ವಯನಾಡಿನ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಆರೋಪಿಸಿದರು.
ಕೇರಳಕ್ಕೆ ಒಂದು ದಿನದ ಪ್ರವಾಸವನ್ನು ಕೈಗೊಂಡ ವೇಳೆ ಮಾತನಾಡಿದ ರಾಹುಲ್, ಭಾರತದ ಕುರಿತು ತನಗೆ ಮಾತ್ರ ತಿಳಿದಿದ್ದು, ಭಾರತವನ್ನು ಅವರೇ ಅರ್ಥೈಸಿದ್ದಾರೆ ಎಂದು ಮೋದಿ ತಿಳಿದುಕೊಂಡಿದ್ದಾರೆ. ಇತರರಿಗೆ ಈ ಬಗ್ಗೆ ಏನು ತಿಳಿದಿಲ್ಲ ಎಂದು ಭಾವಿಸುವುದು ಅಹಂಕಾರದ ಪರಮಾವಧಿ ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ಕೇರಳದ ಮಲಪ್ಪುರಂ ನಲ್ಲಿ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಿದರು.
ಭಾರತೀಯರ ನಡುವೆ ವೈಷಮ್ಯ ಬಿತ್ತುವ ಪ್ರಧಾನಿ ನಡೆಯನ್ನು ವಿರೋಧಿಸುವುದಾಗಿ ರಾಹುಲ್ ಗಾಂಧಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.