ನವದೆಹಲಿ: ಭಾರತೀಯ ಚುನಾವಣಾ ಆಯೋಗವು ಅಕ್ಟೋಬರ್ 30 ರಂದು ವಿವಿಧ ರಾಜ್ಯಗಳಿಗೆ ಉಪ ಚುನಾವಣೆಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಮೂರು ಲೋಕಸಭಾ ಮತ್ತು 30 ಅಸೆಂಬ್ಲಿ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಉಪಚುನಾವಣೆಯ ಮತ ಎಣಿಕೆ ಮತ್ತು ಫಲಿತಾಂಶ ನವೆಂಬರ್ 2 ರಂದು ನಡೆಯಲಿದೆ.
ದಾದ್ರ – ಹವೇಲಿ, ದಿಯು, ಮಧ್ಯಪ್ರದೇಶ ಮತ್ತು ಹಿಮಾಚಲದ ಯುಟಿ ಎಂಬಲ್ಲಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಮಾತ್ರವಲ್ಲ ವಿಧಾನಸಭಾ ಕ್ಷೇತ್ರದ 30 ಕಡೆಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.
ಚುನಾವಣಾ ಆಯೋಗ ಪಶ್ಚಿಮ ಬಂಗಾಳದ ದಿನ್ಹಾಟಾ, ಶಾಂತಿಪುರ, ಖರ್ದಹಾ ಮತ್ತು ಗೋಸಬಾ ಎಂಬಲ್ಲಿ ಉಳಿದ ಸ್ಥಾನಗಳಿಗೆ ಉಪಚುನಾವಣೆಗೆ ದಿನಾಂಕಗಳನ್ನು ಘೋಷಿಸಿದೆ.