ಮುಲ್ಕಿ | ಭೀಕರ ರಸ್ತೆ ಅಪಘಾತ: ಓರ್ವ ಸಾವು

Prasthutha|

ಮುಲ್ಕಿ: ಕಾರು ಪಲ್ಟಿಯಾಗಿ ಓರ್ವ ಸಾವನ್ನಪ್ಪಿ ಇಬ್ಬರು ಅಲ್ಪಸ್ವಲ್ಪ ಗಾಯಗೊಂಡ ಘಟನೆ ಕ್ಷೀರಸಾಗರದ ಬಳಿ ನಡೆದಿದೆ.

- Advertisement -

ಪಕ್ಷಿಕೆರೆ ಪಂಜ ನಿವಾಸಿ ರಘುನಾಥ್ ಪೂಜಾರಿ (40) ಮೃತಪಟ್ಟ ಯುವಕ. ಗಾಯಾಳುಗಳನ್ನು ಮುಲ್ಕಿ ಸಮೀಪದ ಮಟ್ಟು ನಿವಾಸಿ ಹಿಮಕರ ಮತ್ತು ಕಾರ್ತಿಕ್ (ಕೇಶವ ಪಂಜ) ಎಂದು ಗುರುತಿಸಲಾಗಿದೆ

ರಘುನಾಥ್ ತನ್ನ ಮಿತ್ರರೊಂದಿಗೆ ಕಾರಿನಲ್ಲಿ ಮುಲ್ಕಿಯಿಂದ ಸುರತ್ಕಲ್ ಕಡೆಗೆ ಹೋಗುತ್ತಿದ್ದಾಗ ಕ್ಷೀರಸಾಗರ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ನಡುವೆ ಏಕಾಏಕಿ ಬೈಕ್ ಕ್ರಾಸ್ ಮಾಡುತ್ತಿದ್ದ ವೇಳೆಯಲ್ಲಿ ಅಪಘಾತ ತಪ್ಪಿಸಲು ಯತ್ನಿಸಿದಾಗ ಕಾರಿನ ಚಾಲಕ ಬ್ರೇಕ್ ಹಾಕಿದ್ದು ಈ ಸಂದರ್ಭ ಕಾರು ಡಿವೈಡರ್ ಮೇಲೇರಿ ಮಂಗಳೂರಿನಿಂದ ಉಡುಪಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ

- Advertisement -

ಸ್ಥಳಕ್ಕೆ ಸುರತ್ಕಲ್ ಟ್ರಾಫಿಕ್ ಇನ್ಸ್ಪೆಕ್ಟರ್ ಶರೀಫ್, ಮುಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಪಘಾತದ ವಾಹನವನ್ನು ತೆರವುಗೊಳಿಸಿದ್ದಾರೆ.



Join Whatsapp