ಫೆಲೆಸ್ತೀನ್ ಸಂಸದೆ ಖಾಲಿದಾ ಜರ್ರಾರ್ ಇಸ್ರೇಲ್ ಜೈಲಿನಿಂದ ಬಿಡುಗಡೆ

Prasthutha|

ಗಾಝಾ: ಫೆಲೆಸ್ತೀನ್ ಮೂಲದ ರಾಜಕೀಯ ಮತ್ತು ನಾಗರಿಕ ಸಮಾಜದ ನಾಯಕಿ ಸಂಸದೆ ಖಾಲಿದಾ ಜರ್ರಾರ್ ಅವರು ಇಸ್ರೇಲ್ ಜೈಲಿನಿಂದ ಎರಡು ವರ್ಷಗಳ ನಂತರ ಬಿಡುಗಡೆಯಾಗಿದ್ದಾರೆ.

- Advertisement -

ಭಾನುವಾರ ಮಧ್ಯಾಹ್ನ ಜೆನಿನ್ ನಗರದ ಪಶ್ಚಿಮ ಸೇಲಂ ಚೆಕ್ ಪೋಸ್ಟ್ ನಲ್ಲಿ ಇಸ್ರೇಲ್ ಅಧಿಕಾರಿಗಳು ಎಡಪಂಥೀಯ ಮತ್ತು ಫೆಲೆಸ್ತೀನ್ ಲೆಜಿಸ್ಲೇಟಿವ್ ಕೌನ್ಸಿಲ್ ನ ಸದಸ್ಯರಾದ ಜರ್ರಾರ್ ಅವರನ್ನು ಬಿಡುಗಡೆಗೊಳಿಸಿದರು.

2019 ಅಕ್ಟೋಬರ್ 31 ರಂದು ತನ್ನ ಮನೆಯಿಂದ ಬಂಧಿತರಾದ ಜರ್ರಾರ್ 20 ತಿಂಗಳು ವಿಚಾರಣೆಯಿಲ್ಲದೆ ಜೈಲಿನಲ್ಲಿ ಕಳೆದಿದ್ದರು. ಮಾತ್ರವಲ್ಲ ಬಿಡುಗಡೆ ಆದೇಶದ ಎಂಟು ತಿಂಗಳ ಬಳಿಕ ಇಸ್ರೇಲ್ ಅಧಿಕಾರಿಗಳು ಬಿಡುಗಡೆಗೊಳಿಸಿದ್ದಾರೆ.

- Advertisement -

ಈ ಮಧ್ಯೆ ಜರ್ರಾರ್ ಅವರ ಪುತ್ರಿ ಸುಹಾ ಅನಾರೋಗ್ಯದಿಂದಾಗಿ ಜುಲೈನಲ್ಲಿ ರಾಮಲ್ಲಾಹ್ ಎಂಬಲ್ಲಿ ನಿಧನರಾಗಿದ್ದರು. ತನ್ನ ಮಗಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಕೋರಿ ಸಾಕಷ್ಟು ಮನವಿ ಮಾಡಿದ ಹೊರತಾಗಿಯೂ, ಇಸ್ರೇಲ್ ಜರ್ರಾರ್ ಅವರನ್ನು ಬಿಡುಗಡೆಗೊಳಿಸಲು ಹಿಂದೇಟು ಹಾಕಿತ್ತು.

ಪ್ರಸಕ್ತ ಈಗ ಬಿಡುಗಡೆಯಾದ ತಕ್ಷಣ ಜರ್ರಾರ್ ಅವರು ರಾಮಲ್ಲಾಹ್ ದಫನ ಭೂಮಿಗೆ ತೆರಳಿ ಸುಹಾಳ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಫಾರ್ ಲಿಬರೇಶನ್ ಆಫ್ ಫೆಲೆಸ್ತೀನ್ (ಪಿ.ಎಫ್.ಎಲ್.ಪಿ) ನ ನಾಯಕರು, ಸದಸ್ಯರು, ಬೆಂಬಲಿಗರು, ಫೆಲೆಸ್ತೀನ್ ಬಂಧಿಖಾನೆ ಮುಖ್ಯಸ್ಥ ಖದುರಾ ಫಾರಿಸ್, ರಾಮಲ್ಲಾಹ್ ಮತ್ತು ಅಲ್ ಬಿರೇಹ್ ನಗರದ ಗವರ್ನರ್ ಲೀಲಾ ಘನಮ್ ಮತ್ತು ಹತ್ತಾರು ಫೆಲೆಸ್ತೀನ್ ಪತ್ರಕರ್ತರು ಜರ್ರಾರ್ ಜೊತೆಯಲ್ಲಿ ದಫನ ಭೂಮಿಯಲ್ಲಿ ಉಪಸ್ಥಿತರಿದ್ದರು.

ಜರ್ರಾರ್ ಅವರು 2006 PFLP ಕಡೆಯಿಂದ PLC ಯ ಸಂಸದರಾಗಿ ಆಯ್ಕೆಯಾದರು. ಮಾತ್ರವಲ್ಲ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ರಾಷ್ಟ್ರೀಯ ಸಮಿತಿಗೆ ನೇಮಕ ಮಾಡಲಾಗಿತ್ತು.



Join Whatsapp