ಗುವಾಹಟಿ: ಅಸ್ಸಾಂ ಸರ್ಕಾರ ನಿರಾಶ್ರಿತರನ್ನು ಒಕ್ಕಲೆಬ್ಬಿಸುವ ನಡೆಯನ್ನು ಖಂಡಿಸಿ ಪ್ರತಿಭಟನೆ ಕೈಗೊಂಡ ಅಸ್ಸಾಂ ನಾಗರಿಕ ಮೇಲೆ ಪೊಲೀಸರು ಯದ್ವಾತದ್ವ ಗುಂಡು ಹಾರಿಸಿದ ಪರಿಣಾಮ ಇಬ್ಬರು ಮೃತಪಟ್ಟು, ಹಲವಾರು ಮಂದಿ ಗಾಯಗೊಂಡಿದ್ದರು.
ಈ ಮಧ್ಯೆ ಪೊಲೀಸರು ಅಮಾನವೀಯವಾಗಿ ನಡೆಸಿದ ಶೂಟೌಟ್ ಗೆ 12 ರ ಬಾಲಕ ಬಲಿಯಾಗಿದ್ದಾನೆ. ಷಾಕ್ ಪರೀದ್ ಎನ್ನುವ ಬಾಲಕನ ಎದೆಗೆ ಗುಂಡು ತಗುಲಿದ ಕಾರಣ ಸ್ಥಳದಲ್ಲೇ ಮೃತ ಪಟ್ಟಿರುವುದನ್ನು ಸ್ಥಳೀಯರು ಖಚಿತಪಡಿಸಿದ್ದಾರೆ.
ಪ್ರಸಕ್ತ ಘಟನೆಗೆ ಸಂಬಂಧಿಸಿದಂತೆ ಯೂತ್ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಎಂಬವರು ತನ್ನ ಟ್ವೀಟ್ ಖಾತೆಯಲ್ಲಿ ಬಾಲಕನ ಫೋಟೋ ಮತ್ತು ಆಧಾರ್ ಕಾರ್ಡ್ ಅನ್ನು ಪೋಸ್ಟ್ ಮಾಡಿದ್ದಾರೆ. ಬಾಲಕ ಪೋಸ್ಟ್ ಆಫೀಸ್ ಗೆ ತೆರಳಿ ತನ್ನ ಆಧಾರ್ ಕಾರ್ಡನ್ನು ಪ್ರಿಂಟ್ ಮಾಡಿ ಮರಳುತ್ತಿದ್ದ ವೇಳೆಯಲ್ಲಿ ಪೊಲೀಸರು ಗುಂಡು ಹೊಡೆದು ಸಾಯಿಸಿದ್ದಾರೆ ಎಂಬುದಕ್ಕೆ ಆತನ ಕಿಸೆಯಲ್ಲಿ ಪತ್ತೆಯಾಗಿರುವ ಆಧಾರ್ ಕಾರ್ಡ್ ಸಾಕ್ಷಿಯಾಗಿದೆ.
ಅಸ್ಸಾಂ ಪೊಲೀಸರ ಈ ಅಮಾನವೀಯ ಕುಕೃತ್ಯವನ್ನು ಖಂಡಿಸಿರುವ ನೆಟ್ಟಿಗರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.