ಮುಂಬೈ: ಬಿಜೆಪಿ ಕಚೇರಿಯಲ್ಲೇ ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತನ ವಿರುಧ್ಧ FIR ದಾಖಲಾಗಿದೆ. ಕಳೆದ ವರ್ಷ ಪಕ್ಷ ಸೇರ್ಪಡೆಯ ಸಂದರ್ಭ ಈ ಘಟನೆ ನಡೆದಿದೆ ಎಂದು ಮಹಿಳೆಯು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಬಿಜೆಪಿ ಸದಸ್ಯೆಯಾಗಿಸಲು ಸಾಹಾಯ ಮಾಡುತ್ತೇನೆಂದು ಹೇಳಿ, ಮುಂಬೈನ ಬೋರಿವಾಲಿಯಲ್ಲಿನ ಬಿಜೆಪಿ ಕಾರ್ಪೊರೇಟ್ ಕಛೇರಿಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಮಹಿಳೆಯ ದೂರಿನಂತೆ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು