ಮಂಗಳೂರು: ಕಂಬಳಿಯೊಳಗೆ ಲಕ್ಷ ಮೌಲ್ಯದ ಚಿನ್ನ ಸಾಗಾಟಕ್ಕೆ ಯತ್ನ | ಆರೋಪಿ ವಶಕ್ಕೆ

Prasthutha|

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸಿದ ಪ್ರಕರಣಕ್ಕೆ ಓರ್ವನನ್ನು ಏರ್ ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಸುಮಾರು 13 ಲಕ್ಷ ಮೌಲ್ಯದ ಚಿನ್ನವನ್ನು ಕಂಬಳಿಯೊಳಗೆ ಅಡಿಗಿಸಿಟ್ಟು ಸಾಗಾಟಕ್ಕೆ ಪ್ರಯತ್ನಿಸಿದ್ದು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -

ಗುಲಾಬಿ ಬಣ್ಣದ ಹೂವಿನ ಡಿಸೈನ್ ಕಂಬಳಿಯೊಳಗೆ ಚಿನ್ನವನ್ನು ಅಡಗಿಸಲಾಗಿತ್ತು, ಕಾನೂನು ಬಾಹಿರವಾಗಿ ಸಾಗಾಟಕ್ಕೆ ಯತ್ನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುಬೈನಿಂದ ಆಗಮಿಸಿದ ಕೇರಳ ಮೂಲದ ಪ್ರಯಾಣಿಕನ ವಿರುಧ್ದ ಇದೀಗ ಪ್ರಕರಣ ದಾಖಲಾಗಿದೆ.

ಇತ್ತೀಚೆಗಷ್ಟೆ ಅಧಿಕಾರಿಗಳು ಮಹಿಳೆಯರ ಹೇರ್ ಬ್ಯಾಂಡ್ ಮೂಲಕ ಚಿನ್ನ ಸಾಗಾಟಕ್ಕೆ ಯತ್ನಿಸಿದ್ದ ಓರ್ವನನ್ನು ಬಂಧಿಸಿದ್ದರು.



Join Whatsapp