ಉದ್ಯೋಗ ಸಿಗುವವರೆಗೂ ಗೋವಾದ ನಿರುದ್ಯೋಗಿಗೆ ತಿಂಗಳಿಗೆ 3000 ರೂ. ಭತ್ಯೆ: ಕೇಜ್ರಿವಾಲ್

Prasthutha|

ಪಣಜಿ: ಗೋವಾದಲ್ಲಿ 2022ರಲ್ಲಿ ನಡೆಯಲಿರುವ ಚುನಾವಣೆ ನಿಮಿತ್ತ ಮತ ಸೆಳೆಯಲು ಅರವಿಂದ್ ಕೇಜ್ರಿವಾಲ್ ಏಳು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಮೊದಲನೇದಾಗಿ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.

- Advertisement -

ಗೋವಾದ ಪ್ರತಿ ಮನೆಯಲ್ಲಿರುವ ಒಬ್ಬ ನಿರುದ್ಯೋಗಿಗೆ ತಿಂಗಳಿಗೆ 3000 ರೂ.ಭತ್ಯೆ ನೀಡಲಾಗುತ್ತದೆ. ಅವರಿಗೆ ಉದ್ಯೋಗ ಸಿಗುವವರೆಗೂ ಈ ಹಣ ನೀಡಲಾಗುತ್ತದೆ. ಕೆಲಸ ಸಿಕ್ಕ ಬಳಿಕ ಅದನ್ನು ನಿಲ್ಲಿಸಲಾಗುತ್ತದೆ. ಅಲ್ಲದೆ ಶೇ.80ರಷ್ಟು ಉದ್ಯೋಗವನ್ನು ಗೋವಾದ ಜನರಿಗಾಗಿಯೇ ಅಂದರೆ ಸ್ಥಳೀಯರಿಗಾಗಿಯೇ ಮೀಸಲಿಡಲಾಗುತ್ತದೆ ಎಂದೂ ಭರವಸೆ ನೀಡಿದ್ದಾರೆ.

ಲಂಚವಿಲ್ಲದೆ ಸರ್ಕಾರಿ ಕೆಲಸ ಪಡೆಯಲು ಸಾಧ್ಯವಿಲ್ಲ ಎಂಬ ನಂಬಿಕೆ ಬಲವಾಗಿ ಇದೆ. ಆ ಸಂಪ್ರದಾಯವನ್ನು ನಾವು ಸಂಪೂರ್ಣವಾಗಿ ಹೋಗಲಾಡಿಸುತ್ತೇವೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

- Advertisement -



Join Whatsapp