ಅಲ್ ಖೋಬರ್: 91 ನೇ ಸೌದಿ ರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ಇಂಡಿಯನ್ ಸೋಶಿಯಲ್ ಫೋರಮ್, ಖೋಬರ್ ಸೌತ್ ಬ್ಲಾಕ್ ವತಿಯಿಂದ ‘ಸೌದಿ ನ್ಯಾಷನಲ್ ಡೇ ಟ್ರೋಫಿ 2021’ ಕ್ರಿಕೆಟ್ ಪಂದ್ಯಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.
ರಾಖ ಕಬ್ಬಾನಿ ಕ್ರೀಡಾಂಗಣದಲ್ಲಿ ಮುಖ್ಯ ಅತಿಥಿಗಳು ಸಾಂಕೇತಿಕವಾಗಿ ಕ್ರಿಕೆಟ್ ಆಡುವ ಮೂಲಕ ಪಂದ್ಯಾಕೂಟಕ್ಕೆ ಚಾಲನೆ ನೀಡಿದರು.
ಪಂದ್ಯಾಕೂಟದ ಫೈನಲ್ ನಲ್ಲಿ ಪಯೊನೀರ್ ಪ್ಯಾಂಥರ್ಸ್ ತಂಡವನ್ನು ಆರು ರನ್ ಗಳಿಂದ ಸೋಲಿಸುವ ಮೂಲಕ ಮಚ್ಲಿ ವಾರಿಯರ್ಸ್ ಟ್ರೋಫಿ ಗೆದ್ದುಕೊಂಡಿತು. ಇದರೊಂದಿಗೆ ಪಯೊನೀರ್ ಪ್ಯಾಂಥರ್ಸ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಪಂದ್ಯಾಕೂಟದುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಮಚ್ಲಿ ವಾರಿಯರ್ಸ್ ತಂಡದ ಹಾರಿಸ್ ಬಜಾಲ್ ಸರಣಿ ಶ್ರೇಷ್ಠ ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಯೊನೀರ್ ಪ್ಯಾಂಥರ್ಸ್ ನ ಫಯಾಝ್ ಮತ್ತು ಝಮೀರ್ ಕ್ರಮವಾಗಿ ಬೆಸ್ಟ್ ಬೌಲರ್ ಹಾಗೂ ಬೆಸ್ಟ್ ಬ್ಯಾಟ್ಸ್ ಮನ್ ಪ್ರಶಸ್ತಿಗೆ ಭಾಜನರಾದರು.
ಆರಂಭದಲ್ಲಿ ಪಂದ್ಯಾಕೂಟ ಉದ್ಘಾಟನೆಯ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ.ಎಸ್.ಎಫ್ ಸೌತ್ ಬ್ಲಾಕ್ ಅಧ್ಯಕ್ಷ ಮುಹಮ್ಮದ್ ಸುನೈಫ್ ವಹಿಸಿದ್ದರು. ಮುಖ್ಯ ಅತಿಥಿಗಳಾದ ಮೀರಾಜ್ ಗುಲ್ಬರ್ಗ (ಅಧ್ಯಕ್ಷರು ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ ಸಮಿತಿ) ಹನೀಫ್ ಜೋಕಟ್ಟೆ ( ಇಂಡಿಯನ್ ಫ್ರೆಟೆರ್ನಿಟಿ ಫೋರಮ್ ಜಿಲ್ಲಾ ಕಾರ್ಯ ಸಮಿತಿ ಸದಸ್ಯ) ಅನಿಸ್ ಪಟೇಲ್ (ಮ್ಯಾನೇಜಿಂಗ್ ಡೈರೆಕ್ಟರ್ RAGCE) ವಝಿರ್ ಅಲಿ (ಫೈನಾನ್ಸ್ ಮ್ಯಾನೇಜರ್ ಯೂನಿವರ್ಸಲ್ ಇನ್ಸ್ಪೆಕ್ಷನ್ ಕಂಪನಿ ಲಿಮಿಟೆಡ್) ಶರೀಫ್ ಅಡ್ಡೂರ್ (ಉಪಾಧ್ಯಕ್ಷರು ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ ಸಮಿತಿ) ಝಕೀರ್ ಹುಸೈನ್ ಗುಲ್ಬರ್ಗ (ಉಪಾಧ್ಯಕ್ಷರು ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ನಾರ್ತ್ ಬ್ಲಾಕ್) ಖಲೀಲ್ ಇಬ್ರಾಹಿಂ ( ಅಧ್ಯಕ್ಷರು ಇಂಡಿಯನ್ ಫ್ರೆಟೆರ್ನಿಟಿ ಫೋರಮ್ ಖೋಬರ್ ವಲಯ)ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುಹೈಲ್ ಮುಕ್ಕ (ಕಾರ್ಯದರ್ಶಿ, ಇಂಡಿಯನ್ ಸೋಶಿಯಲ್ ಫೋರಮ್, ಮಂಗಳೂರು ಸಿಟಿ ಬ್ರಾಂಚ್) ಕಾರ್ಯಕ್ರಮ ನಿ ರೂಪಿಸಿದರು. ಐ.ಎಸ್. ಎಫ್. ಸ್ವಯಂ ಸೇವಕರು ಎಂದಿನಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮ ನೆರವೇರಿಸಿ ನೆರೆದವರ ಮೆಚ್ಚುಗೆಗೆ ಪಾತ್ರರಾದರು.