ಭುವನೇಶ್ವರ್: ಒಡಿಸ್ಸಾ ಪೊಲೀಸರು ಬೃಹತ್ ಗಾಂಜಾ ಪ್ರಕರಣವನ್ನು ಭೇದಿಸಿದ್ದು, ಸೋಮವಾರ ಒಂದೇ ದಿನ ಮೂರು ಟನ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ನಿನ್ನೆ ರಾಜ್ಯಾದ್ಯಂತ ವಾಹನ ತಪಾಸಣಾ ವಿಶೇಷ ಅಭಿಯಾನವನ್ನು ನಡೆಸಿದ ಪೊಲೀಸರಿಗೆ ಒಟ್ಟು 3 ಟನ್ ಗಾಂಜಾ ಸಿಕ್ಕಿದೆ.
ಮಲ್ಕಂಗಿರಿ ಜಿಲ್ಲೆಯ ಪೊಲೀಸರು ಲಾರಿಯೊಂದನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ 2 ಕೋಟಿ ರೂ. ಮೌಲ್ಯದ 2.25 ಟನ್ ಗಾಂಜಾ ಸಿಕ್ಕಿದೆ. ಇಡೀ ದೇಶಕ್ಕೆ ಒಡಿಸ್ಸಾದಿಂದಲೇ ಮರಜಿವಾನ ಎಂಬ ಗಾಂಜಾವನ್ನು ಪೂರೈಸಲಾಗುತ್ತಿದೆ ಎಂಬುದು ಬೆಳಕಿಗೆ ಬಂದಿದೆ.
ಅದೇ ರೀತಿ ರಾಷ್ಟ್ರೀಯ ಹೆದ್ದಾರಿ 16ರ ಬನಾನಾ-ಲಾಡನ್ ನಿಂದ ಬರುತ್ತಿದ್ದ ಲಾರಿಯೊಂದನ್ನು ತಪಾಸಣೆ ನಡೆಸಿದಾಗ 1250 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಲಾರಿ ಭುವನೇಶ್ವರಿಗೆ ಬರುತ್ತಿತ್ತು. ಇದರ ಒಟ್ಟು ಮೌಲ್ಯ 1 ಕೋಟಿ ರೂ.ಆಗಿದೆ. ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.