ಆಕಸ್ಮಿಕವಾಗಿ ಮಗು ದೇಗುಲ ಪ್ರವೇಶ| ಗ್ರಾಮಸ್ಥರಿಂದ ಪೋಷಕರಿಗೆ ದಂಡ!

Prasthutha|

ಕೊಪ್ಪಳ:  ದಲಿತ ಮಗುವೊಂದು ಆಕಸ್ಮಿಕವಾಗಿ ದೇಗುಲ ಪ್ರವೇಶಿಸಿದ್ದಕ್ಕೆ ಸವರ್ಣಿಯರು ಮಗುವಿನ ಪೋಷಕರಿಗೆ ದಂಡ ವಿಧಿಸಿದ ಘಟನೆ ಕೊಪ್ಪಳ ಜಿಲ್ಲೆಯ ಹನುಮಸಾಗರ ಸಮೀಪದ ಮಿಯಾಪುರದಲ್ಲಿ ನಡೆದಿದೆ.

- Advertisement -

ಮಗು ದೇವಸ್ಥಾನಕ್ಕೆ ಪ್ರವೇಶಿಸಿದೆ ಎಂದು ಆರೋಪಿಸಿ ಊರಿನ ಗ್ರಾಮಸ್ಥರು ಸೇರಿಕೊಂಡು ಮಗುವಿನ ಪೋಷಕರಿಗೆ ದಂಡ ವಿಧಿಸಿದ್ದಾರೆ.

 ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಕಂದಾಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ದಂಡ ವಿಧಿಸಿದಿವರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಅಮಾನವೀಯವಾಗಿ ನಡೆದುಕೊಂಡವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ದಲಿತ ಪರ ಸಂಘಟನೆಗಳು ಆರೋಪಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.



Join Whatsapp