800ಕ್ಕೂ ಅಧಿಕ ಮುಸ್ಲಿಮರ ಮನೆ ಧ್ವಂಸಗೊಳಿಸಿದ ಅಸ್ಸಾಮ್ ಸರ್ಕಾರ: ಸುರಿಯುವ ಮಳೆಯಲ್ಲೇ ದಿನ ದೂಡುತ್ತಿರುವ ನಿರಾಶ್ರಿತರು

Prasthutha|

ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆ-ಸಿಎಎ ಕಾನೂನು ತಂದು ಅಸ್ಸಾಮ್ ಮುಸ್ಲಿಮರನ್ನು ಸಂಕಷ್ಟಕ್ಕೆ ಸಿಲುಕಿದ್ದ ಸರ್ಕಾರ ಇದೀಗ ಒಂದೇ ದಿನ 800ಕ್ಕೂ ಅಧಿಕ ಮುಸ್ಲಿಮರ ಮನೆಗಳನ್ನು ಧ್ವಂಸಗೊಳಿಸಿ ನಿರಾಶ್ರಿತರನ್ನಾಗಿ ಮಾಡಿದೆ. ಅಸ್ಸಾಮ್ ನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಈ ಮಧ್ಯೆ ಮನೆ ಕಳೆದುಕೊಂಡು ನಿರಾಶ್ರಿತರಾದ ಮುಸ್ಲಿಮರು ಮಳೆಯಲ್ಲೇ ದಿನ ದೂಡುವಂತಾಗಿದ್ದು, ಮಹಿಳೆಯರು ಮತ್ತು ಮಕ್ಕಳು ಭಾರೀ ಮಳೆಗೆ ತತ್ತರಿಸಿದ್ದು, ಅವರ ಪರಿಸ್ಥಿತಿ ಹೇಳತೀರದ್ದಾಗಿದೆ ಎನ್ನಲಾಗಿದೆ.

- Advertisement -


ಅಸ್ಸಾಮ್ ಸರ್ಕಾರ ದರ್ರಾಂಗ್ ಜಿಲ್ಲೆಯಲ್ಲಿ ಒತ್ತುವರಿ ತೆರವು ಹೆಸರಿನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು, ಸೋಮವಾರ ಪೊಲೀಸರು, ಅರೆ ಸೇನಾ ಪಡೆಯೊಂದಿಗೆ 800 ಕ್ಕೂ ಅಧಿಕ ಮುಸ್ಲಿಮರ ಮನೆಗಳನ್ನು ತೆರವುಗೊಳಿಸಿದೆ. ಮುಸ್ಲಿಮರು ಅಕ್ರಮವಾಗಿ ಸರ್ಕಾರದ ಜಾಗದಲ್ಲಿ ಮನೆ ಮಾಡಿ ನೆಲೆಸಿದ್ದರು. ಅವುಗಳನ್ನು ತೆರವು ಮಾಡಲಾಗಿದೆ ಎಂಬುದು ಸರ್ಕಾರದ ಜಮಜಾಯಿಷಿ ನೀಡಿದೆ.



Join Whatsapp