ಒಲಿಂಪಿಕ್ಸ್ ನಲ್ಲಿ ಇಸ್ರೇಲ್ ಎದುರಾಳಿಯೊಂದಿಗೆ ಸೆಣಸಾಡಲು ನಿರಾಕರಿಸಿದ ಜುಡೊ ಪಟುಗೆ 10 ವರ್ಷ ನಿಷೇಧ

Prasthutha|

ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಇಸ್ರೇಲ್ ನೊಂದಿಗೆ ಸ್ಪರ್ಧೆ ನಿರಾಕರಿಸಿದ ಹಿನ್ನೆಲೆಯಲ್ಲಿ ಅಲ್ಜಿರಿಯಾದ ಜುಡೊ ಕ್ರೀಡಾಪಟು ಫತಹ್ ನೌರ್ ಗೆ ಕನಿಷ್ಠ 10 ವರ್ಷ ನಿಷೇಧ ಹೇರಿದೆ. ಮಾತ್ರವಲ್ಲದೇ, ಅವರ ತರಬೇತುದಾರನಿಗೂ ಅಂತರಾಷ್ಟ್ರೀಯ ಪಂದ್ಯಾವಳಿಗೆ ನಿಷೇಧ ಹೇರಲಾಗಿದೆ.

- Advertisement -

ಈ ಇಬ್ಬರು ಒಲಿಂಪಿಕ್ಸ್ ಅನ್ನು ರಾಜಕೀಯ, ಧಾರ್ಮಿಕ ಪ್ರಚಾರ ಮತ್ತು ಪ್ರತಿಭಟನೆಯ ವೇಧಿಕೆಯನ್ನಾಗಿಸಿದ್ದಾರೆ ಎಂದು ಐಜೆಎಫ್ ಆರೋಪಿಸಿದೆ.
“ಇದು ಒಲಿಂಪಿಕ್ಸ್ ನಿಯಮಾವಳಿಯ ಸ್ಪಷ್ಟ ಉಲ್ಲಂಘನೆ” ಎಂದು ಗವರ್ನರ್ ಆಫ್ ಫೆಡರೇಶನ್ ತಿಳಿಸಿದೆ.

73 ಕೆ.ಜಿ ವಿಭಾಗದ ಜುಡೊ ಸ್ಪರ್ಧಿಯಾಗಿದ್ದ ಫತಹ್ ನೌರ್ ಅವರು ಎರಡನೇ ಸುತ್ತಿನಲ್ಲಿ ಇಸ್ರೇಲ್ ಪ್ರತಿಸ್ಪರ್ಧಿ ತೊಹರ್ ಬುತ್ ಬುಲ್ ರನ್ನು ಎದುರಿಸುವವರಿದ್ದರು. ಈ ಹಿನ್ನೆಲೆಯಲ್ಲಿ ನೌರ್ ಇಸ್ರೇಲ್ ಪ್ರತಿಸ್ಪರ್ಧಿಯೊಂದಿಗೆ ಸೆಣಸಾಡಲು ನಿರಾಕರಿಸಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

- Advertisement -

ಮಾಧ್ಯಮದೊಂದಿಗೆ ನಡೆದ ಸಂದರ್ಶನದಲ್ಲಿ ಫೆಲೆಸ್ತೀನ್ ಹೋರಾಟಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಇಸ್ರೇಲ್ ಪ್ರತಿಸ್ಪರ್ಧಿಯೊಂದಿಗೆ ಸೆಣಸಾಟ ನಡೆಸುವುದಿಲ್ಲ. ಒಲಿಂಪಿಕ್ಸ್ ಗಿಂತಲೂ ಫೆಲೆಸ್ತೀನ್ ಪರ ಹೋರಾಟ ಮಿಗಿಲಾಗಿದೆ ಎಂದು ಅವರು ತಿಳಿಸಿದ್ದರು.

ಈ ನಿಟ್ಟಿನಲ್ಲಿ 2031 ಜುಲೈ 23ರ ವರೆಗೆ ಅನ್ವಯಿಸುವಂತೆ ಈ ಇಬ್ಬರಿಗೂ ಐಜೆಎಫ್ ನಿಷೇಧ ಹೇರಿದೆ.



Join Whatsapp