ಶಾಕಿಂಗ್ : ಚೆನ್ನೈಯಲ್ಲಿ ಚಲಿಸುತ್ತಿರುವ ವಾಹನದಲ್ಲಿ ಸಾಮೂಹಿಕ ಅತ್ಯಾಚಾರ!

Prasthutha|

ಚೆನ್ನೈ: ದೇಶದಲ್ಲಿ ಸಾಮೂಹಿಕ ಅತ್ಯಾಚಾರ ಸರಣಿ ಮುಂದುವರಿದಿದೆ. 20 ವರ್ಷದ ಯುವತಿಗೆ ಬಲವಂತವಾಗಿ ಡ್ರಗ್ಸ್ ಕೊಟ್ಟು ಚಲಿಸುತ್ತಿರುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಚೆನ್ನೈ ಸಮೀಪದ ಕಾಂಚೀಪುರಂ ನಗರದಲ್ಲಿ ನಡೆದಿದೆ.

- Advertisement -

ಮೊಬೈಲ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಆಕೆಯನ್ನು ಕಾರಿಗೆ ಹತ್ತಿಸಿಕೊಂಡು ಈ ಕೃತ್ಯ ಎಸಗಲಾಗಿದೆ.

ಕಾರಿನಲ್ಲಿ ಪರಿಚಿತ ವ್ಯಕ್ತಿ ಇದ್ದುದರಿಂದ ಯುವತಿ ಕಾರನ್ನು ಹತ್ತಿದ್ದಾಳೆ. ಆತನನ್ನು ಪೊಲೀಸರು ಗುಣಶೀಲನ್‌ ಎಂದು ಗುರುತಿಸಿದ್ದಾರೆ. ಆತ ಮತ್ತು ಅವನ ಸ್ನೇಹಿತರು ಸೇರಿ ಆಕೆಯ ಮೇಲೆ ಚಲಿಸುತ್ತಿರುವ ಕಾರಿನಲ್ಲೇ ಹೇಯ ಕೃತ್ಯ ಎಸಗಿದ್ದಾರೆ ಎನ್ನ​ಲಾ​ಗಿದೆ.

- Advertisement -

ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸುತ್ತಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ದುಷ್ಕರ್ಮಿಗಳನ್ನು ಬಂಧಿಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp