ಬೆಳ್ಳಾರೆ: ದೆಹಲಿಯ ಸಿವಿಲ್ ಡಿಫೆನ್ಸ್ ಅಧಿಕಾರಿಯ ಅತ್ಯಾಚಾರ ಮತ್ತು ಹತ್ಯೆಗೈದ ಪ್ರಕರಣವನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ವಲಯ ಸಮಿತಿ ಹಾಗೂ ವುಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ಳಾರೆ ಜಂಟಿ ಆಶ್ರಯದಲ್ಲಿ ಬೆಳ್ಳಾರೆ ಬಸ್ಸು ತಂಗುದಾಣದ ಬಳಿ ಬ್ರಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯ ಹಾಗೂ ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆ ಮಾತನಾಡಿ, ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು ರಾಷ್ಟ್ರ ರಾಜಧಾನಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯನ್ನು ಕ್ರೂರವಾಗಿ ಅತ್ಯಾಚಾರಗೈದು ಹತ್ಯೆಮಾಡಲು ಕಿರಾತಕರಿಗೆ ಧೈರ್ಯ ಬಂದಿದೆ ಎಂದರೆ ಈ ದೇಶದ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದನ್ನು ಸೂಚಿಸುತ್ತದೆ. ದೇಶದ ಸಾಮಾನ್ಯ ಮಹಿಳೆಯರು ಎಷ್ಟು ಸುರಕ್ಷಿತರಿಂದಿರಬಹುದು ಎಂದು ಪ್ರಶ್ನಿಸಿದರು.
ಸಭೆಯಲ್ಲಿ ವುಮೆನ್ ಇಂಡಿಯಾ ಮೂವ್ಮೆಂಟ್ ದ.ಕ.ಜಿಲ್ಲಾ ಅಧ್ಯಕ್ಷೆ ನಶ್ರಿಯಾ ಬೆಳ್ಳಾರೆ ಮಾತನಾಡಿ, ದೇಶದ ಹಲವು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ಸರಿಯಾದ ಶಿಕ್ಷೆ ದೊರಕದೇ ಶ್ರೀರಕ್ಷೆ ಸಿಕ್ಕಿದ್ದೇ, ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಈ ರೀತಿ ಅಮಾನವೀಯವಾಗಿ ಅತ್ಯಾಚಾರಗೈದು ಕೊಲೆಗೆಯ್ಯಲ್ಪಡಲು ಕಾರಣ. ಸಾಬಿಯಾ ಸೈಫ್ ರ ಕುಟುಂಬ ಕ್ಕೆ ಸರ್ಕಾರ ತಕ್ಷಣ ಒಂದು ಕೋಟಿ ರೂಪಾಯಿ ಪರಿಹಾರ ಘೋಷಿಸಲು ವುಮೆನ್ ಇಂಡಿಯಾ ಮೂವ್ಮೆಂಟ್ ಆಗ್ರಹಿಸುತ್ತದೆ ಎಂದರು.
ಪ್ರತಿಭಟನಾ ಸಭೆ ಯಲ್ಲಿ ಪಾಪ್ಯುಲರ್ ಫ್ರಂಟ್ ರಾಜ್ಯ ಮುಖಂಡ ಶಾಫಿ ಬೆಳ್ಳಾರೆ, ಎಸ್.ಡಿ.ಪಿ.ಐ ಮುಖಂಡರುಗಳಾದ ಹಾಜಿ.ಕೆ.ಮಮ್ಮಾಲಿ, ಬಶೀರ್.ಬಿ.ಎ, ಸವಣೂರು ಗ್ರಾಮ ಪಂಚಾಯತ್ ಸದಸ್ಯ ರಫೀಕ್ ಎಂಎ, ಪಾಪ್ಯುಲರ್ ಫ್ರಂಟ್ ಬೆಳ್ಳಾರೆ ವಲಯ ಅಧ್ಯಕ್ಷ ಫಾರೂಕ್ ನಿಂತಿಕಲ್, ಎಸ್.ಡಿ.ಪಿ.ಐ ಬೆಳ್ಳಾರೆ ಗ್ರಾಮ ಸಮಿತಿ ಅಧ್ಯಕ್ಷ ಸಿದ್ದೀಕ್ ಬೆಳ್ಳಾರೆ, ಕಾರ್ಯದರ್ಶಿ ಜಾಬಿರ್, ಆಶಿರ್ ಎ.ಬಿ, ಅಬ್ದುಲ್ ರಹಿಮಾನ್ ತಂಬಿನಮಕ್ಕಿ, ಯು.ಎಚ್.ಝೈನುದ್ದೀನ್, ರಶೀದ್ ಎಂ.ಆರ್, ಶಫೀಮ್ ಬೆಳ್ಳಾರೆ, ಬಶೀರ್.ಕೆ , ಸದ್ದಾಂ ಪಳ್ಳಿಮಜಲು, ಹಾಗೂ ಮಹಿಳೆಯರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. ಎಸ್.ಡಿ.ಪಿ.ಐ ಬೆಳ್ಳಾರೆ ಗ್ರಾಮ ಸಮಿತಿ ಸದಸ್ಯ ಶಫೀಖ್ ಸ್ವಾಗತಿಸಿ ವಂದಿಸಿದರು.