ಗೋಹತ್ಯೆ ಆರೋಪಿ ರಕ್ಷಣೆ| ನಾಲ್ವರು ಪೊಲೀಸರು ಅಮಾನತು

Prasthutha|

ಫತೇಪುರ : ಗೋಹತ್ಯೆ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಿದ ಆರೋಪದ ಮೇಲೆ ನಾಲ್ವರು ಪೊಲೀಸರನ್ನು ಅಮಾನತು ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

- Advertisement -

ಅಮಾನತಿಗೊಳಗಾದ ಪೊಲೀಸರನ್ನು ಸಬ್ ಇನ್ಸ್ಪೆಕ್ಟರ್ ಶಮಿ ಆಶ್ರಪ್ ಹಾಗೂ ಅನೀಶ್ ಕುಮಾರ್ ಸಿಂಗ್, ಮುಖ್ಯಪೇದೆ ಮನೋಜ್ ಕುಮಾರ್ ಹಾಗೂ ಪೇದೆ ರಾಜೇಶ್ ತಿವಾರಿ ಎಂದು ಗುರುತಿಸಲಾಗಿದೆ.  

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಸಿಂಗ್, ನಾಲ್ವರು ಪೊಲೀಸರು ಗೋಹತ್ಯೆ ಆರೋಪಿಯನ್ನು ಬಚಾವ್ ಮಾಡಲು ಯತ್ನಿಸಿದ್ದರು. ಆದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.



Join Whatsapp