ಜೆರುಸಲೇಂ: ಶುಕ್ರವಾರ ಸಂಜೆ ಇಸ್ರೇಲ್ ಕಡೆಗೆ ಹಮಾಸ್ ದಾಳಿ ನಡೆಸಿದೆ ಎಂದು ಆರೋಪಿಸಿ ಯುದ್ಧ ವಿಮಾನಗಳ ಮೂಲಕ ಇಸ್ರೇಲ್ ಆಕ್ರಮಣನಡೆಸಿದೆ. ಗಾಝಾದಲ್ಲಿರುವ ಹಮಾಸ್ ಸೇನಾ ತಾಣಗಳನ್ನು ಗುರಿಯಾಗಿಸಿ ಈ ದಾಳಿಯನ್ನು ನಡೆಸಲಾಗಿದೆ ಎಂದು ಇಸ್ರೇಲ್ ಸೇನೆಯ ವಕ್ತಾರರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ರಾಕೆಟ್ ದಾಳಿಯನ್ನು ಎಚ್ಚರಿಸುವ ಸೈರನ್ ಗಳು ಗಾಝಾಪಟ್ಟಿಯ ಬಳಿ ಶುಕ್ರವಾರ ಮೊಗಳಿದ್ದವು ಎಂದು ಇಸ್ರೇಲ್ ಸೇನೆ ಹೇಳಿದೆ. ಈ ವಾರದ ಆರಂಭದಲ್ಲಿ ಗರಿಷ್ಠ ಭದ್ರತೆಯ ಇಸ್ರೇಲಿ ಜೈಲಿನಿಂದ ತಪ್ಪಿಸಿಕೊಂಡಿದ್ದ ಗಾಝಾದ ಇಸ್ಲಾಮಿಕ್ ಚಳುವಳಿಯ 6 ಕೈದಿಗಳಲ್ಲಿ 4 ಕೈದಿಗಳನ್ನು ಪೊಲೀಸರು ಮರಳಿ ಸೆರೆಹಿಡಿದ ಕೆಲವೇ ಗಂಟೆಗಳಲ್ಲಿ ಹಮಾಸ್ ನಮ್ಮ ಮೇಲೆ ರಾಕೆಟ್ ದಾಳಿ ನಡೆದಿದೆ ಎಂದು ಇಸ್ರೇಲ್ ಆರೋಪಿಸಿದೆ.
ಒಟ್ಟಾರೆಯಾಗಿ ಮೇ ತಿಂಗಳಲ್ಲಿ ನಡೆದ ಭೀಕರ ಯುದ್ಧದಿಂದಾಗಿ ಉಭಯ ರಾಷ್ಟ್ರಗಳ ಹಲವಾರು ಮಂದಿ ಸಾವನ್ನಪ್ಪಿದ್ದರು. ಪ್ರಸಕ್ತ ಎರಡೂ ರಾಷ್ಟ್ರಗಳಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವುದು ಸಾರ್ವಜನಿಕರನ್ನು ಧೃತಿಗೆಡಿಸಿದೆ.