ಗರ್ಭಪಾತಕ್ಕಾಗಿ ನಕಲಿ ವೈದ್ಯ ನೀಡಿದ ಔಷಧಿ ಸೇವಿಸಿದ ಯುವತಿ ಸಾವು!

Prasthutha|

ಕೃಷ್ಣಗಿರಿ: ಗರ್ಭಪಾತಕ್ಕಾಗಿ ನಕಲಿ ವೈದ್ಯ ನೀಡಿದ ಔಷಧಿ ಸೇವಿಸಿ 27 ವರ್ಷದ ಯುವತಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ ಘಟನೆ ಹೊಸೂರಿನ ತೋರಪಲ್ಲಿಯಲ್ಲಿ ನಡೆದಿದೆ.

- Advertisement -

ಯುವತಿಯ ಸಾವಿಗೆ ಕಾರಣನಾದ ನಕಲಿ ವೈದ್ಯನ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂಟು ವಾರಗಳ ಗರ್ಭಿಣಿಯಾದ ಯುವತಿ ಗರ್ಭಪಾತಕ್ಕಾಗಿ ಸ್ಥಳೀಯ ಚಿಕಿತ್ಸಾಲಯಕ್ಕೆ ಆಗಮಿಸಿದ್ದಳು. ಗರ್ಭಪಾತಕ್ಕೆ ಒಪ್ಪಿದ ವೈದ್ಯ ಯುವತಿಗೆ ಕೆಲವು ಔಷಧಗಳನ್ನು ನೀಡಿದ್ದಾನೆ. ಔಷಧಿಯನ್ನು ಸೇವಿಸಿದ ಯುವತಿ ವಿಪರೀತ ರಕ್ತಸ್ರಾವಗೊಂಡು ಸಾವನ್ನಪ್ಪಿದ್ದಾಳೆ.



Join Whatsapp