ಅಲಹಾಬಾದ್: ಗ್ಯಾನ್ ವಾಪಿ ಮಸೀದಿಯ ಆವರಣದಲ್ಲಿ ಎಎಸ್ ಐ ಸರ್ವೆ ನಡೆಸಲು ಸ್ಥಳೀಯ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ.
ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ಗ್ಯಾನ್ ವಾಪಿ ಮಸೀದಿಯ ಆವರಣದಲ್ಲಿ ಸರ್ವೇ ನಡೆಸಲು ಭಾರತೀಯ ಪುರಾತತ್ವ ಇಲಾಖೆಗೆ ವಾರಾಣಸಿಯ ನ್ಯಾಯಾಲಯವು ಏಪ್ರಿಲ್ 8ರಂದು ಅನುಮತಿ ನೀಡಿತ್ತು. ಸ್ಥಳೀಯ ನ್ಯಾಯಾಲಯದ ಈ ಆದೇಶಕ್ಕೆ ಗುರುವಾರ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ.
ಸಮೀಕ್ಷೆ ನಡೆಸುವುದರ ವಿರುದ್ಧ ಸುನ್ನಿ ವಕ್ಫ್ ಬೋರ್ಡ್ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿತ್ತು. ಇದೀಗ ಹೈಕೋರ್ಟ್ ಅರ್ಜಿಯನ್ನು ಪುರಸ್ಕರಿಸಿ ತಡೆ ನೀಡಿದೆ. ಪುರಾತತ್ವ ಇಲಾಖೆಗೆ ಸರ್ವೆ ನಡೆಸುವಂತೆ ಕೋರಿ ಐವರು ಸದಸ್ಯರ ಸಮಿತಿ ಸಮೀಕ್ಷೆ ನಡೆಸಿ ಆ ಭಾಗದಲ್ಲಿ ಮಸೀದಿಯ ಮುಂಚೆ ಯಾವುದಾದರೂ ಧರ್ಮದ ಕಟ್ಟಡದ ಅಸ್ತಿತ್ವ ಇತ್ತೇ ಎಂಬುವುದನ್ನು ಪರಿಶೀಲನೆ ನಡೆಸಲು ಸ್ಥಳೀಯ ನ್ಯಾಯಾಲಯ ಸೂಚಿಸಿತ್ತು.