ನವದೆಹಲಿ: ತೃಣಮೂಲ ಕಾಂಗ್ರೆಸ್ ಪಕ್ಷವು ಕೋಲ್ಕತ್ತಾ ಬಳಿಯ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರ ನಿವಾಸದ ಮೇಲೆ ಇಂದು ಮುಂಜಾನೆ 3 ಬಾಂಬ್ ಗಳನ್ನು ಎಸೆದಿದೆ ಎಂದು ಬಿಜೆಪಿ ಮುಖಂಡ ದಿಲೀಪ್ ಘೋಷ್ ಆರೋಪಿಸಿದ್ದಾರೆ. ದಾಳಿಯಿಂದ ಸಂಸದರ ನಿವಾಸದ ಗೇಟ್ ಗೆ ಹಾನಿಯಾಗಿದ್ದು, ಯಾರಿಗೂ ಗಾಯವಾಗಿಲ್ಲ ಎಂದು ಅವರು ತಿಳಿಸಿದರು.
ಕೋಲ್ಕತ್ತಾದಿಂದ 100 ಕಿ.ಮೀ ದೂರದಲ್ಲಿರುವ ಜಗತ್ತಾಲ್ ನಲ್ಲಿರುವ ಬಿಜೆಪಿ ಸಂಸದರ ಮನೆಯ ಮೇಲೆ ಬೈಕಿನಲ್ಲಿ ಆಗಮಿಸಿದ 3 ದುಷ್ಕರ್ಮಿಗಳ ಇಂದು ಮುಂಜಾನೆ ಸರಿಸುಮಾರು 6.30 ಕ್ಕೆ ಬಾಂಬ್ ಗಳನ್ನು ಎಸೆದು ಪರಾರಿಯಾಗಿದ್ದಾರೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಬಿಜೆಪಿಯ ಈ ಆರೋಪವನ್ನು ನಿರಾಕರಿಸಿರುವ ಆಡಳಿತಾರೂಢ ಟಿ.ಎಮ್.ಸಿ ಬಂಗಾಳ ಬಿಜೆಪಿಯ ಆಂತರಿಕ ಕಲಹದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿದೆ ಎಂದು ಬಿಜೆಪಿಗೆ ತಿರುಗೇಟು ನೀಡಿದೆ.