ರಾಜ್ಯದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿಲ್ಲ: ಸುಧಾಕರ್

Prasthutha|

ಬೆಂಗಳೂರು: ನಮ್ಮರಾಜ್ಯದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿಲ್ಲ,  ಸೋಂಕಿಗೆ ಲಸಿಕೆಯೂ ಇಲ್ಲ, ಚಿಕಿತ್ಸೆಯೂ ಇಲ್ಲ. ರೋಗದ ಲಕ್ಷಣಗಳನ್ನು ಆಧಾರಿಸಿ ಚಿಕಿತ್ಸೆ ಕೊಡುತ್ತೇವೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

- Advertisement -

ಕೇರಳದಲ್ಲಿ ನಿಫಾಗೆ ಮಗುವೊಂದು ಮೃತಪಟ್ಟಿದ್ದು, ಅಲ್ಲಿನ ಸರ್ಕಾರ ಸೋಂಕಿತರ ಮೇಲೆ ತೀವ್ರ ನಿಗಾ ಇಟ್ಟಿದೆ. ಕೇರಳ ಸರ್ಕಾರ ನಿಫಾ ತಡೆಗೆ ಕೈಗೊಂಡ ಕ್ರಮಗಳು ಮಾಧಾನ ತಂದಿದೆ ಎಂದು ಹೇಳಿದರು. 

ಕೇರದಲ್ಲಿ ಮೂರನೇ ಸಲ ನಿಫಾ ಬಂದಿದ್ದು, ಕೇರಳದಲ್ಲಿ ಕಾಡು ಹೆಚ್ಚಿರೋದರಿಂದ ಸೋಂಕು ಕಾಣಿಸಿಕೊಂಡಿರಬಹುದು. ಪ್ರಾಣಿಗಳು ತಿಂದು ಬಿಟ್ಟ ಹಣ್ಣನ್ನು ಮನುಷ್ಯ ತಿಂದರೆ ನಿಫಾ ಬರುತ್ತದೆ ಎಂದು ಸುಧಾಕರ್ ತಿಳಿಸಿದರು.

- Advertisement -

ನಿಫಾ ಕುರಿತು ರಾಜ್ಯದ ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇನ್ನಷ್ಟು ಗಂಭೀರ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಿಫಾ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಮಾಡುತ್ತೇನೆ. ರಾಜ್ಯದಲ್ಲಿ ನಿಫಾ ಬರದಂತೆ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.



Join Whatsapp