ಇನ್ನು ಮುಂದೆ ವೈದ್ಯ ವಿದ್ಯಾರ್ಥಿಗಳಿಗೆ RSS, ಜನಸಂಘ ನಾಯಕರ ಪಾಠ | ಮಧ್ಯಪ್ರದೇಶ ಶಿಕ್ಷಣ ಸಚಿವ

Prasthutha|

ಭೋಪಾಲ್ : ಇನ್ನು ಮುಂದೆ ಮಧ್ಯಪ್ರದೇಶದ MBBS ವಿದ್ಯಾರ್ಥಿಗಳಿಗೆ ಆರೆಸ್ಸೆಸ್ ಸಂಸ್ಥಾಪಕ ಕೆಬಿ ಹೆಡ್ಗೆವಾರ್, ಭಾರತೀಯ ಜನಸಂಘದ ನಾಯಕ ದೀನ ದಯಾಳ್ ಉಪಾಧ್ಯಾಯ, ಸ್ವಾಮಿ ವಿವೇಕಾನಂದ ಮತ್ತು ಬಿಆರ್ ಅಂಬೇಡ್ಕರ್ ರ ಕುರಿತಾದಂತೆ ಮೊದಲ ವರ್ಷದ ಫೌಂಡೇಶನ್‌ ಕೋರ್ಸ್‌ನ ಭಾಗವಾಗಿ ಉಪನ್ಯಾಸ ನೀಡಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ರವಿವಾರ ಹೇಳಿದ್ದಾರೆ.

- Advertisement -

ವಿದ್ಯಾರ್ಥಿಗಳ ಗುಣವನ್ನು ಉತ್ತಮಪಡಿಸಲು, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮತ್ತು ವೈದ್ಯಕೀಯ ನೈತಿಕತೆಯನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತದೆ ಎಂದ ಅವರು ಹೇಳಿದರು. ಮೊದಲ ವರ್ಷದ MBBS ವಿದ್ಯಾರ್ಥಿಗಳು ಇದರೊಂದಿಗೆ ಆಯುರ್ವೇದದ ಪ್ರಮುಖ ವ್ಯಕ್ತಿಯಾಗಿರುವ ಚರಕ ಮಹರ್ಷಿ ಹಾಗೂ ಭಾರತದ ಶಸ್ತ್ರ ಚಿಕಿತ್ಸೆಯ ಪಿತಾಮಹನೆಂದು ಕರೆಯಲ್ಪಡುವ ಸುಶ್ರುತ ಕುರಿತಾದಂತೆಯೂ ಕಲಿಯಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

MBBS (ಬ್ಯಾಚುಲರ್ ಆಫ್ ಮೆಡಿಸಿನ್, ಬ್ಯಾಚುಲರ್ ಆಫ್ ಸರ್ಜರಿ) ಮೊದಲ ವರ್ಷದ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಹೆಡ್ಗೆವಾರ್ ಜಿ, ಉಪಾಧ್ಯಾಯ, ಸ್ವಾಮಿ ವಿವೇಕಾನಂದ, ಅಂಬೇಡ್ಕರ್ ಮತ್ತು ಇತರ ಮಹಾನ್ ವ್ಯಕ್ತಿಗಳ ಕುರಿತು ಉಪನ್ಯಾಸ ನೀಡಲಾಗುವುದು. ಈ ಮಹಾನ್ ವ್ಯಕ್ತಿಗಳ ಕುರಿತಾದ ಪಾಠಗಳು ವಿದ್ಯಾರ್ಥಿಗಳಲ್ಲಿ ಮೌಲ್ಯಗಳು, ತತ್ವಗಳು, ಸಾಮಾಜಿಕ ಮತ್ತು ವೈದ್ಯಕೀಯ ನೈತಿಕತೆಯನ್ನು ಅಳವಡಿಸುತ್ತದೆ “ಎಂದು ಸಾರಂಗ್ ಪಿಟಿಐಗೆ ತಿಳಿಸಿದ್ದಾರೆ.

Join Whatsapp