ಕಾಪು: ಇಲ್ಲಿನ ಗರೋಡಿ ಬಳಿ ವಸಂತ ಮಾಧವ್ ಮತ್ತು ಅವರ ಮಕ್ಕಳಾದ ಮನೋಜ್, ಸಂತೋಷ್, ವಿನಯ್ 27 ಲಕ್ಷ ರೂಪಾಯಿ ವೆಚ್ಚದಲ್ಲಿ ಇಲ್ಲಿ ಮೂವರು ಮಹಿಳೆಯರ ಮೂರ್ತಿ ಇಟ್ಟ ದೇವಸ್ಥಾನ ಒಂದನ್ನು ಕಟ್ಟಿಸಿದ್ದು, ಅದು ಸೆಪ್ಟೆಂಬರ್ 3ರಂದು ಉದ್ಘಾಟನೆ ಆಗಿದೆ.
ಗೀತಾ ಯಾದವ ಪೂಜಾರಿ (53) ಅವರು ಇತ್ತೀಚೆಗೆ ನಿಧನರಾದರು. ಮುಂಬಯಿಯಲ್ಲಿ ಕಾರ್ಪೊರೇಟರ್ ಆಗಿದ್ದ ಅವರು ತುಳುನಾಡು ಮತ್ತು ಸರ್ವ ಹಿತ ಕಾರ್ಯಗಳಲ್ಲಿ ಭಾರೀ ಸಾಧನೆ ಮಾಡಿದ ಕಾಂಗ್ರೆಸ್ ನಾಯಕಿಯಾಗಿದ್ದರು. ಅವರ ಗಂಡ ಮತ್ತು ಮಕ್ಕಳು ಈ ದೇವಸ್ಥಾನ ಕಟ್ಟಿಸಿದ್ದಾರೆ.
ದೇವಸ್ಥಾನದಲ್ಲಿ 52 ವಯಸ್ಸಿಗೆ ನಿಧನರಾಗಿದ್ದ ಗೀತಾರ ತಾಯಿ ಕಲ್ಯಾಣಿ ಬಾಯಿ ಪೂಜಾರಿ, 80ರ ಹಿರಿ ಜೀವನ ನಡೆಸಿ ನಿಧನರಾಗಿರುವ ಗೀತಾರ ಅಜ್ಜಿ ಬೈದಿ ಪೂಜಾರ್ದಿ ಅವರ ಮೂರ್ತಿಗಳು ಸಹ ಇವೆ.