ಕೊಲೆ ಆರೋಪಿಗೆ ಹೈಕೋರ್ಟ್ ನಿಂದ ಶರತ್ತು ಬದ್ಧ ಜಾಮೀನು ಮಂಜೂರು

Prasthutha|

ಮಂಗಳೂರು: ಸುರತ್ಕಲ್ ಬಳಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿನ ಆರೋಪಿಗೆ ನ್ಯಾಯಲಯವು ಶರತ್ತು ಬದ್ದ ಜಾಮಿನು ನೀಡಿದೆ.

- Advertisement -

2019 ನವೆಂಬರ್ ತಿಂಗಳಿನಲ್ಲಿ ಸುರತ್ಕಲ್ ನ ಜೀವನ್ ತಾರಾ ವೈನ್ ಶಾಪ್ ಬಳಿ ಎರಡು ತಂಡಗಳ ನಡುವೆ ನಡೆದ ಗಲಾಟೆಯಲ್ಲಿ ಸಂದೇಶ್ ಎನ್ನುವ ವ್ಯಕ್ತಿಯ ಕೊಲೆಯಾಗಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟು ಒಟ್ಟು 8 ಆರೋಪಿಗಳನ್ನು ದಸ್ತಗಿರಿ ಮಾಡಿ ಅವರ ಮೇಲೆ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದರು. ಆರೋಪಿಗಳ ಪೈಕಿ ಮೂರನೇ ಆರೋಪಿ ಗಣೇಶ್ ಯಾನೆ ಪಂಚ್ ಗಣೇಶ್ ಎಂಬಾತ ಮಾನ್ಯ ಮಂಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು, ಮಾನ್ಯ ಜಿಲ್ಲಾ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶ ನೀಡಿತ್ತು.

ಅದನ್ನು ಪ್ರಶ್ನಿಸಿ ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿತ್ತು. ಹೈಕೋರ್ಟ್ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ರವರು ಅರ್ಜಿಯನ್ನು ಪರಿಶೀಲಿಸಿ ಶರತ್ತು ಬದ್ಧ ಜಾಮೀನನ್ನು ಮಂಜೂರು ಮಾಡಿ ಆದೇಶ ನೀಡಿದ್ದಾರೆ. ಹೈಕೋರ್ಟ್ ನಲ್ಲಿ ಆರೋಪಿಯ ಪರವಾಗಿ ಮಂಗಳೂರಿನ ಯುವ ನ್ಯಾಯವಾದಿ ಆಸಿಫ್ ಬೈಕಾಡಿ ಮತ್ತು ರುಬಿಯ ಅಖ್ತರ್ ರವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಾದವನ್ನು ಮಂಡಿಸಿದ್ದರು.



Join Whatsapp