ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಬರಾದಾರ್ ಗೆ ನೂತನ ಅಫ್ಘಾನ್ ಸರ್ಕಾರದ ನೇತೃತ್ವ : ಅಧಿಕೃತ ವರದಿ

Prasthutha|

ಕಾಬೂಲ್: ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಬರದಾರ್ ಅವರು ನೂತನ ಅಫ್ಘಾನ್ ಸರ್ಕಾರವನ್ನು ಮುನ್ನಡೆಸುವ ಕುರಿತು ಶೀಘ್ರದಲ್ಲೇ ಅಧಿಕೃತ ಘೋಷಣೆ ನಡೆಸಲಾಗುವುದೆಂದು ತಾಲಿಬಾನ್ ಬಂಡುಕೋರರು ಶುಕ್ರವಾರ ತಿಳಿಸಿದ್ದಾರೆ.

- Advertisement -

ತಾಲಿಬಾನ್ ರಾಜಕೀಯ ವಿಭಾಗದ ಮುಖ್ಯಸ್ಥ ಬರದಾರ್, ತಾಲಿಬಾನ್ ಸಂಸ್ಥಾಪಕ ದಿವಂಗತ ಮುಲ್ಲಾ ಉಮರ್ ಅವರ ಪುತ್ರ ಮುಲ್ಲಾ ಮುಹಮ್ಮದ್ ಯಾಕೂಬ್, ಹಿರಿಯರಾದ ಶೇರ್ ಮುಹಮ್ಮದ್ ಸ್ಟಾನೆಕ್ ಜಾಯ್ ಅವರು ಸರ್ಕಾರದ ಪ್ರಮುಖ ಹುದ್ದೆಗಳನ್ನು ಅಲಂಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ತಾಲಿಬಾನ್ ನ ಎಲ್ಲಾ ಉನ್ನತ ನಾಯಕರು ಕಾಬೂಲ್ ಗೆ ಆಗಮಿಸಿ ನೂತನ ಸರ್ಕಾರವನ್ನು ಘೋಷಿಸಲು ಅಂತಿಮ ಸಿದ್ದತೆಗಳನ್ನು ಮಾಡಲಾಗಿದೆ ಎಂದು ತಾಲಿಬಾನ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.



Join Whatsapp