“ನೋ ವ್ಯಾಕ್ಸಿನೇಷನ್ -ನೋ ರೇಷನ್ -ನೋ ಪೆನ್ಷನ್ ” ವಿವಾದಕ್ಕೆ ಕಾರಣವಾದ ಜಿಲ್ಲಾಧಿಕಾರಿ ಆದೇಶ

Prasthutha|

ಚಾಮರಾಜನಗರ : ಕೋವಿಡ್ ಲಸಿಕೆ ಪಡೆಯದವರಿಗೆ ಪಡಿತರ ಮತ್ತು ಪಿಂಚಣಿ ತಡೆಹಿಡಿಯಲಾಗುವುದು ಎಂದು ಜಿಲ್ಲಾಧಿಕಾರಿ ಡಾ.  ಡಾ. ಎಂ.ಆರ್. ರವಿ ಹೇಳಿರುವುದು ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

- Advertisement -

“ನೋ ವ್ಯಾಕ್ಸಿನೇಷನ್ -ನೋ ರೇಷನ್ -ನೋ ಪೆನ್ಷನ್ ” ಎಂಬ ವಿನೂತನ ಕಾರ್ಯಕ್ರಮವನ್ನು ಬುಧವಾರದಿಂದ ಜಿಲ್ಲೆಯಲ್ಲಿ ಜಾರಿ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ, ಸಾಕಷ್ಟು ಜಾಗೃತಿ, ನಿರಂತರ ಅರಿವು ಮೂಡಿಸುತ್ತಿದ್ದರೂ ಲಸಿಕೆ ಪಡೆಯಲು ಜನರು ಅಸಡ್ಡೆ ತೋರುತ್ತಿರುವುದರಿಂದ ಈ ತೀರ್ಮಾನ ಕೈಗೊಂಡಿರುವುದಾಗಿ ಅವರು ಸಮರ್ಥಿಸಿಕೊಂಡಿದ್ದಾರೆ .

ಕಳೆದ ಆ.27 ರಿಂದ ಸೆ.3 ರ ವರೆಗೆ ಜಿಲ್ಲೆಯಲ್ಲಿ ಲಸಿಕಾ ಮಹಾ ಮೇಳ ನಡೆಯುತ್ತಿದ್ದು, 4 ನೇ ದಿನವಾದ ಸೋಮವಾರ ಗ್ರಾಮ, ಪಟ್ಟಣ, ನಗರ ಪ್ರದೇಶಗಳಲ್ಲಿ ಲಸಿಕೆಯನ್ನು ತೀವ್ರಗೊಳಿಸಲಾಗಿದೆ ಎಂದರು.

- Advertisement -

238 ಆರೋಗ್ಯ ತಂಡದೊಂದಿಗೆ 27 ಮೊಬೈಲ್ ತಂಡ ಕೂಡ ವ್ಯಾಕ್ಸಿನ್ ಕಾರ್ಯದಲ್ಲಿ ತೊಡಗಿದ್ದು ಜಿಲ್ಲೆಯಲ್ಲಿ ಈಗಾಗಲೇ ಶೇ.75 ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ.

ಜಿಲ್ಲೆಯಲ್ಲಿ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ವೇತನ ಸೇರಿದಂತೆ ಮಾಸಾಶನ ಪಡೆಯುವ 2 ಲಕ್ಷ 20 ಸಾವಿರ ಮಂದಿ ಪಿಂಚಣಿದಾರರು ಇದ್ದಾರೆ. ವ್ಯಾಕ್ಸಿನೇಷನ್‌ ಪ್ರಮಾಣಪತ್ರ ಇದ್ದರೆ ಮಾತ್ರ ಇವರಿಗೆ ಮಾಸಾಶನ ಪಾವತಿಸುವಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್ ಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. 



Join Whatsapp