ಅಫ್ಘಾನಿನಲ್ಲಿ ಅಮೆರಿಕಾದ 20 ವರ್ಷಗಳು ; ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು : ಅಚ್ಚರಿ ಮೂಡಿಸುತ್ತಿದೆ ಅಂಕಿ ಅಂಶಗಳು

Prasthutha|

ಕಾಬೂಲ್: ಅಸೋಸಿಯೇಟೆಡ್ ಪ್ರೆಸ್ – ಎನ್.ಒ.ಆರ್.ಸಿ ಸೆಂಟರ್ ಫಾರ್ ಪಬ್ಲಿಕ್ ಅಫೇರ್ಸ್ ರಿಸರ್ಚ್ ಇತ್ತೀಚೆಗೆ ನಡೆಸಿದ ನಡೆಸಿದ ಜನಾಭಿಪ್ರಾಯದಲ್ಲಿ 62 ಶೇಕಡಾ ಅಮೆರಿಕನ್ನರು ಅಫ್ಘಾನ್ ನೊಂದಿಗೆ ಅಮೆರಿಕ ಸೈನ್ಯ ನಡೆಸುವ ಮಿಲಿಟರಿ ಕಾರ್ಯಾಚರಣೆ ಲಾಭದಾಯಕವಲ್ಲವೆಂದು ತಿಳಿಸಿದ್ದಾರೆ. 2001 ರಲ್ಲಿ ಅಫ್ಘಾನ್ ವಿರುದ್ಧ ಅಮೆರಿಕ ಯುದ್ಧವನ್ನು ಆರಂಭಿಸಿದಾಗ 88 ಶೇಕಡಾ ಅಮೆರಿಕನ್ನರು ಅಫ್ಘಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಬೆಂಬಲಿಸಿದರು.

- Advertisement -

ಇದು ಕಾಲಕಾಲಕ್ಕೆ ಬದಲಾಗುವ ಜನರ ಅಭಿಪ್ರಾಯವಾಗಿದ್ದರೂ ಅಂಕಿಅಂಶಗಳು ಸತ್ಯವನ್ನು ಮಾತನಾಡುತ್ತವೆ. 20 ವರ್ಷಗಳ ಕಾಲ ನಡೆದ ಯುದ್ಧವನ್ನೊಮ್ಮೆ ಅವಲೋಕಿಸಿದರೆ ಈ ಯುದ್ಧದಲ್ಲಿ 2352 ಅಮೆರಿಕನ್ ಮಿಲಿಟರಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅದೇ ರೀತಿ 20 ಸಾವಿರ ಅಮೆರಿಕನ್ನರು ಅಫ್ಘಾನಿಸ್ತಾನದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಗಾಯಗೊಂಡಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದೆ.

ಅದರ ಹೊರತಾಗಿ 66 ಸಾವಿರ ಅಫ್ಘಾನ್ ಭದ್ರತಾ ಸಿಬ್ಬಂದಿ ಮತ್ತು 47245 ಅಫ್ಘಾನ್ ನಾಗರೀಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ. 51 ದೇಶಗಳು ಅಫ್ಘಾನ್ ವಿರುದ್ಧ ನಡೆಸಿದ ಯುದ್ದದಲ್ಲಿ ಅಮೆರಿಕ $ 2 ಟ್ರಿಲಿಯನ್‌ ಗಿಂತ ಅಧಿಕ ಮೊತ್ತವನ್ನು ಖರ್ಚು ಮಾಡಿದೆ. ಲಕ್ಷಾಂತರ ಡಾಲರ್ ಖರ್ಚು ಮಾಡಿ 3 ಲಕ್ಷ ಅಫ್ಘಾನ್ ಸೇನಾ ಸಿಬ್ಬಂದಿಗೆ ತರಬೇತಿ ನೀಡಿದ ಹೊರತಾಗಿ ತಾಲಿಬಾನ್ ಬಂಡುಕೋರರು ಅಮೆರಿಕ ಸೈನ್ಯವನ್ನು ಅಫ್ಘಾನ್ ನಿಂದ ಹಿಂಪಡೆದ 10 ದಿನಗಳ ಅಂತರದಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ಮತ್ತೆ ವಶಪಡಿಸಿದೆ.

- Advertisement -

ಅಮೆರಿಕ ನಡೆಸಿದ ಭೀಕರ ಯುದ್ಧದಿಂದಾಗಿ ಅಫ್ಘಾನಿಸ್ತಾನವು ವಿಶ್ವದ ಎರಡನೇ ಅತಿದೊಡ್ಡ ನಿರಾಶ್ರಿತರ ರಾಷ್ಟ್ರವಾಗಿ ಹೊರಹೊಮ್ಮಿದೆ. ಪ್ರಸಕ್ತ 25 ಲಕ್ಷ ಅಫ್ಘಾನ್ ಜನತೆ ತಮ್ಮ ದೇಶದಿಂದ ವಲಸೆ ಹೋಗಿರುವುದು ದುರಂತ ಸತ್ಯ. ಮಾತ್ರವಲ್ಲದೆ ಅಮೆರಿಕ ತನ್ನ ಸೈನ್ಯವನ್ನು ಹಿಂಪಡೆದ ನಂತರ ಉಂಟಾದ ರಾಜಕೀಯ ಬಿಕ್ಕಟ್ಟನ್ನು ಅವಲೋಕಿಸಿದಾಗ 2.7 ಲಕ್ಷ ಜನರನ್ನು ಸ್ಥಳಾಂತರಿಲಾಗಿದೆ.

ಕಳೆದುಕೊಂಡ ಅಮೂಲ್ಯ ಜೀವ, ಪಲಾಯನಗೊಂಡ ಜನರ ಪರಿಸ್ಥಿತಿ, ವ್ಯಯಿಸಿದ ಒಟ್ಟು ಮೊತ್ತ, ಅಫ್ಘಾನಿಸ್ತಾನವನ್ನು ಮರಳಿ ಪಡೆಯಲು ತಾಲಿಬಾನ್ ಬಂಡುಕೋರರು ತೆಗೆದುಗೊಂಡ ದಿನಗಳ ಸಂಖ್ಯೆಯನ್ನು ಅವಲೋಕಿಸಿದಾಗ ಅಫ್ಘಾನಿಸ್ತಾನದ ವಿರುದ್ಧದ ಯುದ್ಧವು ಅಮೆರಿಕಕ್ಕೆ ಲಾಭಕ್ಕಿಂತ ಅಪಾಯವನ್ನು ತಂದೊಡ್ಡಿದೆಯೆಂದು ಅಮೆರಿಕನ್ ನಾಗರಿಕರು ಅಭಿಪ್ರಾಯ ಪಟ್ಟಿದ್ದಾರೆ.



Join Whatsapp