-ಪೇರೂರು ಜಾರು
ಮಂಗಳೂರು: ಇತಿಹಾಸ ಕಾಲವು ಒಂದರ ಮೇಲೆ ಒಂದು ಸವಾರಿ ಮಾಡುತ್ತಲೇ ಬಂದಿವೆ. ಬಿಜೆಪಿ ಸರಕಾರಗಳಂತೂ ಹೆಸರು ಬದಲಾವಣೆ ತಮ್ಮ ಹಕ್ಕು ಎಂಬಂತಿವೆ. ಆದ್ದರಿಂದ ಈಗ ರಸ್ತೆಗಳೂ ಅಡಗಿಕೊಳ್ಳುವ ಕಾಲ ಬಂದಿದೆ.
ಸಂತ ಅಲೋಶಿಯಸ್ ಕಾಲೇಜು ರಸ್ತೆ ಮುಂದಿನ ತಲೆಮಾರು ಗಮನ ನೀಡಲು ಅಸಾಧ್ಯ ಎನಿಸುವ ಹಾದಿಯಲ್ಲಿ ಇದೆ. ಅಲ್ಲೆಲ್ಲ ಈಗ ಅಲಂಕೃತ ಹೊಸ ರಸ್ತೆ ಹೆಸರು ಬಂದಿದೆ. ಹಾಗಾಗಿ ಸಂತ ಅಲೋಶಿಯಸ್ ಕಾಲೇಜು ರಸ್ತೆ ಹೆಸರು ಅಡಗಿ ಕೂರುವ ಅನಿವಾರ್ಯತೆ ಕಂಡಿದೆ. ಅಡಗಿ ಕುಳಿತಾಗಿದೆ. ಚರಿತ್ರೆ ಎಂದರೆ ಹೀಗೆ, ಮುಂದೊಂದು ದಿನ ಉತ್ಖನನ ಮಾಡಿ ತೆಗೆಯಬೇಕಾಗುತ್ತದೆ.