ಬೆಂಗಳೂರು: ದಾವಣಗೆರೆ ವಿಶ್ವವಿದ್ಯಾನಿಲಯ ಗಣಿತ ಶಾಸ್ತ್ರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಬಿ ಸಿ ಪ್ರಸನ್ನಕುಮಾರವರು ಕರ್ನಾಟಕ ಸರ್ಕಾರದ ವಿಜನ್ ಗ್ರೂಪ್ ಆಫ್ ಸೈನ್ಸ್ & ಟೆಕ್ನಾಲಜಿ ಕೊಡಮಾಡುವ ಅವಾರ್ಡ್ ಫಾರ್ ಬೆಸ್ಟ್ ರಿಸರ್ಚ್ ಪಬ್ಲಿಕೇಷನ್ ಗೆ ಭಾಜನರಾಗಿರುತ್ತಾರೆ.
ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಹಲ್ಸೆ ಅವರು ಸೇರಿದಂತೆ ವಿವಿಯ ಕುಲಸಚಿವರು ಮತ್ತು ವಿಭಾಗದ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ ಡಾ. ಪ್ರಸನ್ನಕುಮಾರ್ ಅವರನ್ನು ಅಭಿನಂದಿಸಿದ್ದಾರೆ.
ಕಳೆದ ವರ್ಷ ಇದೇ ಪ್ರಶಸ್ತಿಯನ್ನು ದಾವಣಗೆರೆ ವಿವಿಯ ಗಣಿತಶಾಸ್ತ್ರ ವಿಭಾಗದ ಇನ್ನೋರ್ವ ಸಹಪ್ರಾಧ್ಯಾಪಕ ಡಾ. ಡಿ ಜಿ ಪ್ರಕಾಶ್ ರವರು ಪಡೆದಿದ್ದರು.