ಮಂಗಳೂರಿನಿಂದ ಗಲ್ಫ್ ದೇಶಗಳಿಗೆ ಇಂದಿನಿಂದ ವಿಮಾನ ಹಾರಾಟ ಆರಂಭ

Prasthutha|

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ದೇಶಗಳಿಗೆ ಆಗಸ್ಟ್ 18ರಿಂದ ಮತ್ತೆ ನೇರ ವಿಮಾನಯಾನ ಪ್ರಾರಂಭಗೊಂಡಿದೆ.

- Advertisement -


ವಿಮಾನ ನಿಲ್ದಾಣದಲ್ಲಿ ಅಪೊಲೋ ಡಯಾಗ್ನಾಸ್ಟಿಕ್ಸ್ ಸಂಸ್ಥೆ ಸಹಭಾಗಿತ್ವದಲ್ಲಿ ವಿಶ್ವ ದರ್ಜೆಯ ಗುಣ ಮಟ್ಟದ ಕೋವಿಡ್ ಆರ್ ಟಿ ಪಿಸಿ ಆರ್ ತುರ್ತು ತಪಾಸಣಾ ಕೇಂದ್ರ ಕಾರ್ಯಾರಂಭಗೊಂಡ ಬೆನ್ನಲ್ಲೇ ಯುನೈಟೆಡ್ ಅರಬ್ ಎಮಿರೆಟ್ಸ್ ( ಯುಎಇ ) ಸರಕಾರದ ನಾಗರಿಕ ವಿಮಾನ ಯಾನ ಪ್ರಾಧಿಕಾರ ವಿಮಾನ ಯಾನ ಪ್ರಾರಂಭಕ್ಕೆ ವಿಧಿಸಿದ್ದ ನಿರ್ಬಂಧಗಳನ್ನು ಹಿಂಪಡೆದು ಯಾನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಯುಎಇ ಆರೋಗ್ಯ ಇಲಾಖೆಯ ನಿರ್ದೇಶನದಂತೆ ಪ್ರತಿಯೊಬ್ಬ ಪ್ರಯಾಣಿಕನೂ ವಿಮಾನ ಬೋರ್ಡಿಂಗ್ ಹಂತಕ್ಕೂ ಆರು ಗಂಟೆಗಳ ಅವಧಿಗೆ ಮುಂಚಿತವಾಗಿ ಆರ್ ಟಿಪಿಸಿಆರ್ ತಪಾಸಣೆ ಮಾಡಿಸಿಕೊಂಡು ನೆಗೆಟಿವ್ ಪ್ರಮಾಣ ಪತ್ರ ಪಡೆದಿರಬೇಕು. ಪರೀಕ್ಷೆಗಳನ್ನು ಅತ್ಯಂತ ಸುರಕ್ಷಿತ ರೀತಿಯಲ್ಲಿ ನಡೆಸಲಾಗುತ್ತದೆ. ಪ್ರತಿ ಪ್ರಯಾಣಿಕರೂ ವಿಮಾನ ಯಾನ ಸಮಯಕ್ಕಿಂತ ಆರು ಗಂಟೆಗೆ ಮುಂಚಿತವಾಗಿ ಏರ್ಪೋರ್ಟ್ ತಲುಪುವುದರಿಂದ ಸಮಯಕ್ಕೆ ಸರಿಯಾಗಿ ರಾಪಿಡ್ ಟೆಸ್ಟ್ ನಡೆಸಿ ವರದಿ ಪಡೆದು ಬೋರ್ಡಿಂಗ್ ವ್ಯವಸ್ಥೆಗೆ ಮುಂದುವರಿಯಲು ಸಾಧ್ಯ ಎಂದು ಪ್ರಕಟಣೆ ತಿಳಿಸಿದೆ.

Join Whatsapp