ಗಾಝಾ: ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಪಡೆ ಸೋಮವಾರ ಪ್ಯಾಲೆಸ್ತೀನ್ ಬಂದೂಕುಧಾರಿಗಳೊಂದಿಗೆ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ಕು ಫೆಲೆಸ್ತೀನಿಯನ್ನರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆಯೆಂದು ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಪಶ್ಚಿಮ ದಂಡೆಯ ಜೆನಿನ್ ನಗರದಲ್ಲಿ ಗಸ್ತು ತಿರುಗುತ್ತಿದ್ದಾಗ ಫೆಲೆಸ್ತೀನ್ ವೇಷದಾರಿಯಾಗಿದ್ದ ಬಂಡುಕೋರರು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಇಸ್ರೇಲ್ ನ ಮೇಲೆ ದಾಳಿ ನಡೆಸಲು ಮುಂದಾದಾಗ ಅವರನ್ನು ಕೊಲ್ಲಲಾಗಿದೆಯೆಂದು ಇಸ್ರೇಲ್ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮದ ಮೂಲಕ ಮಾಹಿತಿ ಜೆನಿನ್ ನಗರದ ಗವರ್ನರ್ ನಾಲ್ಕು ಫೆಲೆಸ್ತೀನಿಯರನ್ನು ಕೊಲ್ಲಲಾಗಿದೆ ಮತ್ತು ಇಸ್ರೇಲ್ ಗೆ ಯಾವುದೇ ನಾಶನಷ್ಟವಾಗಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
1967 ರಲ್ಲಿ ಮಧ್ಯಪ್ರಾಚ್ಯದಲ್ಲಿ ನಡೆದ ಯುದ್ಧದಲ್ಲಿ ಇಸ್ರೇಲ್ ಸೈನ್ಯವು ಪಶ್ಚಿಮ ದಂಡೆಯನ್ನು ವಶಪಡಿಸಿಕೊಂಡಿತ್ತು. ಮಾತ್ರವಲ್ಲದೆ ಫೆಲೆಸ್ತೀನ್ ಈ ಪ್ರದೇಶವನ್ನು ಭವಿಷ್ಯದ ರಾಜಧಾನಿಯಾಗಿ ಹೊಂದಲು ಬಯಸುತ್ತಿದೆಯೆಂದು ಫೆಲೆಸ್ತೀನ್ ಮೂಲಗಳು ಸ್ಪಷ್ಟಪಡಿಸಿವೆ.
1990 ರ ದಶಕದಲ್ಲಿ ಇಸ್ರೇಲ್ ನೊಂದಿಗೆ ನಡೆದ ಮಧ್ಯಕಾಲೀನ ಶಾಂತಿ ಒಪ್ಪಂದಗಳ ಅಡಿಯಲ್ಲಿ ಸ್ಥಾಪಿತವಾದ ಫೆಲೆಸ್ತೀನಿಯನ್ ಪ್ರಾಧಿಕಾರವು ಪಶ್ಚಿಮ ದಂಡೆಯಲ್ಲಿ ಸ್ವಯಂ-ಆಡಳಿತವನ್ನು ನಡೆಸಿತು. ಆದರೆ ಇಸ್ರೇಲಿ ಪಡೆಗಳು ಈ ಪ್ರದೇಶದಲ್ಲಿ ಪ್ರಬಲವಾಗಿದ್ದು, ಶಂಕಿತ ಉಗ್ರರನ್ನು ಬಂಧಿಸುವ ನೆಪವೊಡ್ಡಿ ಇಸ್ರೇಲ್ ಸೈನ್ಯ ಆಗಾಗ್ಗೆ ದಾಳಿ ನಡೆಸಿ ಅಮಾಯಕರನ್ನು ಕೊಲ್ಲಲಾಗುತ್ತಿದೆಯೆಂದು ಫೆಲೆಸ್ತೀನ್ ಆರೋಪಿಸಿದೆ.