ಮುಲ್ಕಿ : ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನೊರ್ಸ್ ಫೋರಮ್ ವತಿಯಿಂದ 75 ನೇ ಸ್ವಾತಂತ್ರೋತ್ಸವದ ಅಂಗವಾಗಿ ಬೃಹತ್ ರಕ್ತದಾನ ಶಿಬಿರವು ಕಾರ್ನಾಡು ನೂರಿಯ ಮದರಸದ ಸಭಾಂಗಣದಲ್ಲಿ ಕೆ ಎಸ್ ಹೆಗಡೆ ಹಾಸ್ಪಿಟಲ್ ದೇರಳಕಟ್ಟೆ ಮಂಗಳೂರು ಇದರ ಸಹ ಭಾಗಿತ್ವದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನೊರ್ಸ್ ಫೋರಮ್ ನ ಅಧ್ಯಕ್ಷರಾದ ಲಿಯಾಕತ್ ಅಲಿ ಅವರು ವಹಿಸಿದ್ದರು. ಮಸ್ಜಿದುನ್ನೂರ್ ಜುಮಾ ಮಸೀದಿ ಕಾರ್ನಾಡು ಇದರ ಖತೀಬರಾದ ಇಸ್ಮಾಯಿಲ್ ದಾರಿಮಿ ದುಆ ಆಶೀರ್ವಚನೆಗೈದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರಹಾಸ ಪೂಜಾರಿ ಯುವ ಜನತೆ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕೆಂದು ಕರೆ ಕೊಟ್ಟರು. ಸಮುದಾಯ ಅರೋಗ್ಯ ಕೇಂದ್ರ ಮುಲ್ಕಿ ಇದರ ಮುಖ್ಯ ವೈದ್ಯಾಧಿಕಾರಿ ಡಾ.ಕೃಷ್ಣ ಶಿಬಿರದ ಉದ್ಘಾಟನೆ ಮಾಡುತ್ತಾ ರಕ್ತದಾನ ನೀಡುವ ಮೊದಲು ವಹಿಸಬೇಕಾದ ಜಾಗೃತಿಯ ಕುರಿತು ಅರಿವು ಮೂಡಿಸಿದರು . ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೆಡಲಿನ್ ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಮಾರಿಯೋಲಾ , ಎಂ.ಇ.ಮುಹಮ್ಮದ್ ಹನೀಫ್ , ಪುತ್ತುಬಾವ ,ಹಕೀಮ್ ಕಾರ್ನಾಡು, ಮುಬೀನ್ ಕೊಳ್ನಾಡು, ವೈದ್ಯಾಧಿಕಾರಿ ಕುನಲ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ಒಟ್ಟು 120 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಸಮಾರೋಪ ಸಮಾರಂಭವು ಮಧ್ಯಾಹ್ನ ನೂರಿಯ ಮದರಸದ ಸಭಾಂಗಣದಲ್ಲಿ ನೆರವೇರಿತು. ಈ ವೇಳೆ ಸಾಮಾಜಿಕ ಕಾರ್ಯಕರ್ತರಾದ ಆಪತ್ಭಾಂಧವ ಮೊಹಮ್ಮದ್ ಆಸಿಫ್ ರವರಿಗೆ ಪ್ರಶಸ್ತ್ರಿ ಪತ್ರ ಮತ್ತು ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭ ಶಿಬಿರದ ಯಶಸ್ವಿಗಾಗಿ ಸಹಕರಿಸಿದ ಕೆ. ಎಸ್. ಹೆಗಡೆ ಆಸ್ಪತ್ರೆ ಸಿಬ್ಬಂದಿ ವರ್ಗದವರನ್ನು ಅಭಿನಂಧಿಸಲಾಯಿತು. ಸಂದರ್ಭ ವಿಶೇಷ ತಹಸೀಲ್ದಾರ್ ಸಿ. ಬಿ. ಕಮಲಮ್ಮ,ಲಯನ್ಸ್ ಕ್ಲಬ್ ಅಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ ರೋಟರಿ ಕ್ಲಬ್ ಅಧ್ಯಕ್ಷರಾದ ಶಿವರಾಂ ಜಿ ಅಮೀನ್ ಮತ್ತು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನೊರ್ಸ್ ಫೋರಮ್ ಮುಲ್ಕಿ ಇದರ ಕಾರ್ಯದರ್ಶಿ ಇಬ್ರಾಹಿಂ ಕಾರ್ನಾಡ್ ಧನ್ಯವಾದ ಸಮರ್ಪಿಸಿದರು. ಸುಫೈದ್ ಮುಲ್ಕಿ ನಿರೂಪಿಸಿದರು.