ಕಾಬೂಲ್ ಪ್ರವೇಶಿಸಿದ ತಾಲಿಬಾನ್ ಪಡೆ: ಅಫ್ಘಾನ್ ಸರ್ಕಾರದಿಂದ ಅಧಿಕೃತ ಮಾಹಿತಿ

Prasthutha|

ಶರಣಾಗತಿಯೇ ಅಫ್ಘಾನ್ ಸರ್ಕಾರದ ಮುಂದಿರುವ ಏಕೈಕ ಮಾರ್ಗ ಎಂದ ತಾಲಿಬಾನ್

- Advertisement -

ಕಾಬೂಲ್: ತಾಲಿಬಾನ್ ಬಂಡುಕೋರರು ಭಾನುವಾರ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಪ್ರವೇಶಿಸಿರುವ ಕುರಿತು ಅಧಿಕೃತ ಹೇಳಿಕೆಯ ಮೂಲಕ ಅಫ್ಘಾನ್ ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಮಾತ್ರವಲ್ಲದೆ ಅಮೇರಿಕ ತನ್ನ ರಾಯಭಾರಿ ಕಚೇರಿ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಿದೆ. ಎಲ್ಲಾ ದಿಕ್ಕುಗಳಿಂದಲೂ ತಾಲಿಬಾನ್ ಬಂಡುಕೋರರು ಕಾಬೂಲ್ ಕಡೆಗೆ ಆಗಮಿಸುತ್ತಿದ್ದಾರೆಂದು ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

- Advertisement -

ಕಾಬೂಲ್ ನಗರದ ಸುತ್ತಮುತ್ತಲಿನ ಪ್ರದೇಶಗಳಿಂದ ಗುಂಡಿನ ಸದ್ದು ಕೇಳಿ ಬರುತ್ತಿದೆಯೆಂದು ಅಫ್ಘಾನ್ ಅಧ್ಯಕ್ಷರ ಅರಮನೆಯ ಮೂಲಗಳು ಸ್ಪಷ್ಟಪಡಿಸಿದೆ. ಆದರೆ ಅಮೇರಿಕಾ ಮಿತ್ರ ಪಡೆ, ಅಫ್ಘಾನಿ ಭದ್ರತಾ ಪಡೆಗಳ ಸಹಯೋಗದೊಂದಿಗೆ ನಗರದ ಮೇಲೆ ನಿಯಂತ್ರಣ ಹೊಂದಿದೆ ಹೇಳಲಾಗುತ್ತಿದೆ.

ಯಾವುದೇ ಹಿಂಸಾತ್ಮಕ ಪ್ರತಿಕ್ರಿಯೆಗೆ ಮುಂದಾಗದೇ ಶಾಂತಿಯುತವಾಗಿ ಕಾಬೂಲ್ ನಗರವನ್ನು ವಶಪಡಿಸುವ ಯೋಜನೆ ತಾಲಿಬಾನ್ ಹೊಂದಿದೆಯೆಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಮಾತ್ರವಲ್ಲದೆ ಕಾಬೂಲ್ ವಿಮಾನ ನಿಲ್ದಾಣ ಹೊರತು ಪಡಿಸಿ ಉಳಿದೆಲ್ಲ ಪ್ರದೇಶವನ್ನು ಅಫ್ಘಾನ್ ಸರ್ಕಾರದ ಕೈಯಿಂದ ತಾಲಿಬಾನ್ ವಶಪಡಿಸಿದೆಯೆಂದು ಸ್ಪಷ್ಟಪಡಿಸಿದೆ. ಶರಣಾಗತಿಯೇ ಅಫ್ಘಾನ್ ಸರ್ಕಾರದ ಮುಂದಿರುವ ಏಕೈಕ ಮಾರ್ಗವೆಂದು ತಾಲಿಬಾನ್ ಹೇಳಿಕೊಂಡಿದೆ.

ಈ ನಡುವೆ ಸರ್ಕಾರವನ್ನು ಬೆಂಬಲಿಸುವ ಇಬ್ಬರು ಸೇನಾ ಕಮಾಂಡರ್ ಗಳಾದ ಅತ್ತ ಮುಹಮ್ಮದ್ ನೂರ್ ಮತ್ತು ಅಬ್ದುಲ್ ರಶೀದ್ ದೋಸ್ತಮ್ ಅವರು ಪಲಾಯನ ಆಗಿದ್ದಾರೆಂದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿದೆ.



Join Whatsapp