ಚೆನ್ನೈ: ಚೆನ್ನೈನ ಕಿಲ್ಪಾಕ್ ಬಳಿಯ ವರದಮ್ಮಾಲ್ ಗಾರ್ಡನ್ ಸ್ಟ್ರೀಟ್ ನಲ್ಲಿ ಆಗಸ್ಟ್ 2 ರಂದು ದೇವಾಲಯದ ಉತ್ಸವದಲ್ಲಿ ಪಾಲ್ಗೊಂಡಿದ್ದ 20 ಜನರಿಗೆ ಕೋವಿಡ್ ದೃಢಪಟ್ಟಿದೆ.
ದೇವಾಲಯದಲ್ಲಿ ವಾರ್ಷಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು 300 ಜನರು ಭಾಗವಹಿಸಿದ್ದರು. ಈ ಪೈಕಿ 47 ವರ್ಷದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಆಕೆಗೆ ಸಕ್ಕರೆ ಕಾಯಿಲೆ ಇತ್ತು, ಕೋವಿಡ್ ಲಸಿಕೆ ಹಾಕಿರಲಿಲ್ಲ ಎಂದು ತಿಳಿದು ಬಂದಿದೆ.
ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಿಗೆ ಕೋವಿಡ್ ದೃಢಪಟ್ಟ ನಂತರ ಕೋವಿಡ್ -19 ಕ್ಲಸ್ಟರ್ ಅನ್ನು ಗುರುತಿಸಿದ ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ),ಸೋಂಕು ಹರಡುವುದನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರೊಂದಿಗೆ ನಿಕಟ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚುವುದು ಮತ್ತು ಪರೀಕ್ಷಿಸುವುದನ್ನು ಜಿಸಿಸಿ ಮಾಡಿದೆ ಎಂದು ಕಾರ್ಪೊರೇಷನ್ ಅಧಿಕಾರಿಗಳು ತಿಳಿಸಿದ್ದಾರೆ.