ಒಲಿಂಪಿಕ್ಸ್ ವಿಜೇತೆ ಲವ್ಲಿನಾಗೆ ಶುಭಕೋರಿದ ಫ್ಲೆಕ್ಸ್ ನಲ್ಲಿ ಅವರ ಪೋಟೋ ನಾಪತ್ತೆ : ವರದಿ ಮಾಡಿದ ಮಾಧ್ಯಮದ ವಿರುದ್ಧವೇ ಪ್ರಕರಣ ದಾಖಲು !

Prasthutha|

ನವದೆಹಲಿ:  ಟೋಕಿಯೋ ಒಲಿಂಪಿಕ್ಸ್ ವಿಜೇತೆ ಲವ್ಲಿನಾ ಬೊರ್ಗೋಹೈನ್‌‌ ಅವರಿಗೆ ಶುಭ ಕೋರಿ  ಹಾಕಲಾಗಿದ್ದ ಫ್ಲೆಕ್ಸ್ ನಲ್ಲಿ ಅವರ ಚಿತ್ರದ ಬದಲು ಅಸ್ಸಾಮ್ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವರ ಭಾವಚಿತ್ರ ಹಾಕಿರುವ ಕುರಿತು ಅಸ್ಸಾಮಿನಾದಾದ್ಯಂತ ಸಾಕಷ್ಟು ವಿವಾದ ಸೃಷ್ಟಿಸಿದೆ.

- Advertisement -

ಮಾತ್ರವಲ್ಲದೆ ಈ ವರದಿಯನ್ನು ಪ್ರಸಾರಮಾಡಿದ ಹಿನ್ನೆಲೆಯಲ್ಲಿ ಅಸ್ಸಾಂ ಮೂಲದ ನ್ಯೂಸ್ ಪೋರ್ಟಲ್ “ದಿಕ್ರಾಸ್ ಕರೆಂಟ್” ವಿರುದ್ಧ ನಕಲಿ ನ್ಯೂಸ್ ಪ್ರಸಾರದ ಆರೋಪದಡಿಯಲ್ಲಿ ಐಪಿಸಿ 294 ಎ/ 500/505 (2) ಸೆಕ್ಷನ್ ಮೂಲಕ  ಅಸ್ಸಾಮ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

 “ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವರಾದ ಪಿಜುಶ್ ಹಜಾರಿಕಾ ನಕಲಿ ಮತ್ತು ಕೆಟ್ಟ ಸುದ್ದಿಯನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಪೋರ್ಟಲ್ ವಿರುದ್ಧ ಕ್ರಮ ಜರುಗಿಸಲಾಗಿದೆಯೆಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

- Advertisement -

ಡಿಐಪಿಆರ್ ಇಂತಹ ಫ್ಲೆಕ್ಸ್ ಗಳನ್ನು ಅಳವಡಿಸುತ್ತಾರೆ . ಒಂದು ವೇಳೆ ಅದನ್ನು ಅವರು ಮಾಡಿದ್ದರೆ ನಾವು ಅವರನ್ನು ಪ್ರಶ್ನೆ ಕೇಳುತ್ತೇವೆ . ಅವರು ಅದನ್ನು ಮಾಡಿಲ್ಲವೆಂದಾದರೆ ಅದಕ್ಕೆ ಅನುಮೋದನೆ ನೀಡಿದವರು ಯಾರು ಎಂಬುವುದರ ಕುರಿತು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವರಾಗಿರುವ ಪಿಜುಶ್ ಹಜಾರಿಕಾ ಅವರನ್ನೂ ನಾವು ಕೇಳಿದ್ದೆವು. ಆದರೆ ಅವರು ಈಗ ಹೋರ್ಡಿಂಗ್‌ಗೆ ನಾವು ಅನುಮೋದನೆ ನೀಡಿಲ್ಲವೆಂದು ಹೇಳಿದ್ದಾರೆ ಎಂದು ವೆಬ್‌ಸೈಟ್‌ನ ಸಂಪಾದಕ ಗೌತಮ್ ಗೊಗೊಯ್‌ ಹೇಳಿದ್ದಾರೆ.



Join Whatsapp