ನವೆದೆಹಲಿ: ದ್ವಾರಕಾದಲ್ಲಿ ಹಜ್ ಹೌಸ್ ನಿರ್ಮಿಸಲು ಅವಕಾಶ ನೀಡುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್-ವಿಎಚ್ ಪಿ ಸವಾಲು ಹಾಕಿದೆ.
ಪಾಲಂ ವಾಯುನೆಲೆ ಮತ್ತು ವಿಮಾನ ನಿಲ್ದಾಣದ ಟರ್ಮಿನಲ್ಗಳು ಇಲ್ಲಿಗೆ ಸಮೀಪದಲ್ಲಿವೆ. ಇದು ಈಗಾಗಲೇ ಜನನಿಬಿಡ ಪ್ರದೇಶವಾಗಿದೆ. ಇಲ್ಲಿ ಹಜ್ ಭವನ ನಿರ್ಮಿಸುವುದು ಸರಿಯಲ್ಲ ಎಂದು ವಿಎಚ್ ಪಿ ಮುಖಂಡ ಸುರೇಂದ್ರ ಜೈನ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಲ್ಯಾಂಡ್ ಜಿಹಾದ್ ನಡೆಯುತ್ತಿದೆ. ಇಂದು ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿ ಅಲ್ಲಿ ಮಸೀದಿ, ಮಜಾರ್ ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಸುರೇಂದ್ರ ಜೈನ್ ಆರೋಪಿಸಿದರು.