ಜೆಇಇ ಪರೀಕ್ಷೆಯಲ್ಲಿ ಗೌರಬ್ ದಾಸ್ ರಾಜ್ಯದಲ್ಲೇ ಪ್ರಥಮ

Prasthutha|

ಬೆಂಗಳೂರು; ರಾಷ್ಟ್ರೀಯ ಮಟ್ಟದ ಅರ್ಹತಾ ಪರೀಕ್ಷೆ-ಜೆಇಇಯಲ್ಲಿ ಸಹಕಾರನಗರದ ನಾರಾಯಣ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಗೌರಬ್ ದಾಸ್ ಅವರ ಶೇಕಡಾ 100ರಷ್ಟು ಅಂಕ ಪಡೆದು ರಾಜ್ಯದಲ್ಲೇ ಮೊದಲ ಸ್ಥಾನ ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ.

- Advertisement -

ಜೆಇಇ ಪರೀಕ್ಷೆಯ ಫಲಿತಾಂಶದಲ್ಲಿ ದೇಶಾದ್ಯಂತ 17 ವಿದ್ಯಾರ್ಥಿಗಳು ಶೇ 100ರಷ್ಟು ಆಂಕ‌ ಪಡೆದಿದ್ದು ಇದರಲ್ಲಿ ನಾರಾಯಣ ಸಮೂಹ ಶಿಕ್ಷಣ ಸಂಸ್ಥೆಗಳ 6 ವಿದ್ಯಾರ್ಥಿಗಳು ಸೇರಿದ್ದು ರಾಜ್ಯದಿಂದ ಈ ಸಾಧನೆ‌ ಮಾಡಿರುವ ಎಕೈಕ ವಿದ್ಯಾರ್ಥಿ ಗೌರಬ್ ದಾಸ್ ಅವರಾಗಿದ್ದಾರೆ.

ನಾರಾಯಣ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪುನೀತ್ ಕೊಥಾಪ  ಕಾರ್ಯ ನಿರ್ವಾಹಕ ನಿರ್ದೇಶಕಿ ಡಾ. ಸಿಂಧೂರ ನಾರಾಯಣ ನಿರ್ದೇಶಕಿ ಶರಣಿ ಅವರು ವಿದ್ಯಾರ್ಥಿ ಗೌರಬ್ ದಾಸ್ ಅವರನ್ನು ಅಭಿನಂದಿಸಿದ್ದಾರೆ.



Join Whatsapp