ತಾಲಿಬಾನ್ ಬಂಡುಕೋರರಿಂದ ದಕ್ಷಿಣ ಕಾಬೂಲ್ ನಲ್ಲಿ ಅಫ್ಘಾನ್ ನ ಮಾಧ್ಯಮ ನಿರ್ದೇಶಕರ ಹತ್ಯೆ

Prasthutha|

ಕಂದಹಾರ್: ಅಫ್ಘಾನಿಸ್ತಾನದ ರಾಜಧಾನಿಯಾದ ಕಾಬೂಲ್ ನಲ್ಲಿ ಶುಕ್ರವಾರ ನಡೆಸಿದ ದಾಳಿಯಲ್ಲಿ ತಾಲಿಬಾನ್ ಬಂಡುಕೋರರು ಅಫ್ಘಾನಿಸ್ತಾನದ ಸರ್ಕಾರಿ ಮಾಧ್ಯಮ ಕೇಂದ್ರದ ನಿರ್ದೇಶಕರನ್ನು ಹತ್ಯೆಮಾಡಿದೆ. ಇತ್ತೀಚೆಗೆ ಹಾಲಿ ರಕ್ಷಣಾ ಸಚಿವರ ಹತ್ಯಾ ಯತ್ನ ನಡೆದ ಕೆಲವು ದಿನಗಳ ನಂತರ ಸರ್ಕಾರಿ ಅಧಿಕಾರಿಯ ಹತ್ಯೆ ಇದಾಗಿದೆಯೆಂದು ಹೇಳಲಾಗುತ್ತಿದೆ.

- Advertisement -

ಅಮೇರಿಕಾ ಮತ್ತು ನ್ಯಾಟೋ ಪಡೆಗಳು ಈ ತಿಂಗಳ ಅಂತ್ಯಕ್ಕೆ ಅಫ್ಘಾನಿಸ್ತಾನದಿಂದ ನಿರ್ಗಮಿಸುವುದರಿಂದ ಅಫ್ಘಾನ್ ನ ಹಕ್ಕುಸ್ವಾಮ್ಯಕ್ಕಾಗಿ ತಾಲಿಬಾನ್ ಬಂಡುಕೋರರು ಮತ್ತು ಅಫ್ಘಾನ್ ಸೇನೆಯ ನಡುವೆ ನಡೆಯುತ್ತಿರುವ ಯುದ್ಧದ ವಾತಾವರಣದ ಹಿನ್ನೆಲೆಯಲ್ಲಿ ಈ ಹತ್ಯೆಗಳು ದಾಖಲಾಗುತ್ತಿವೆ. ತಾಲಿಬಾನ್ ಬಂಡುಕೋರರು ಅಫ್ಘಾನ್ ಸೇನೆಯ ಮೇಲೆ ದಾಳಿ ನಡೆಸಿ ಹಲವು ಜಿಲ್ಲೆಗಳನ್ನು ಈಗಾಗಲೇ ವಶಪಡಿಸಿಕೊಂಡಿದೆ.

ಈ ಮಧ್ಯೆ ತಾಲಿಬಾನ್ ಬಂಡುಕೋರರು ಅಫ್ಘಾನ್ ಸರ್ಕಾರದ ಮಾಧ್ಯಮ ನಿರ್ದೇಶಕರಾದ ದವಾಖಾನ್ ಮೆನಾಪಾಲ್ ಅವರನ್ನು ಶುಕ್ರವಾರ ಸಾಮೂಹಿಕ ಪ್ರಾರ್ಥನೆ ಸಮಯದಲ್ಲಿ ಗುಂಡಿನ ದಾಳಿ ನಡೆಸುವ ಮೂಲಕ ಹತ್ಯೆ ನಡೆಸಿದೆಯೆಂದು ಅಫ್ಘಾನ್ ಸರ್ಕಾರದ ಆಂತರಿಕ ಸಚಿವಾಲಯದ ಉಪ ವಕ್ತಾರ ಸೈದ್ ಹಮೀದ್ ರುಶನ್ ತಿಳಿಸಿದ್ದಾರೆ. ಮಾತ್ರವಲ್ಲದೆ ಮೆನಾಪಾಲ್ ಅವರ ಹತ್ಯೆಯನ್ನು ನಾವೇ ನಡೆಸಿದ್ದೇವೆಂದು ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್ ಅವರು ಖಚಿತಪಡಿಸಿದ್ದಾರೆ. ದವಾಖಾನ್ ಮೆನಾಪಾಲ್ ಅವರು ಈ ಹಿಂದೆ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರ ಉಪ ವಕ್ತಾರರಾಗಿದ್ದರು.

- Advertisement -

ಇದೇ ಮಂಗಳವಾರ ಅಫ್ಘಾನಿಸ್ತಾನದ ಹಾಲಿ ರಕ್ಷಣಾ ಸಚಿವ ಬಿಸ್ಮಿಲ್ಲಾ ಖಾನ್ ಮೊಹಮ್ಮದಿ ಅವರನ್ನು ಗುರಿಯಾಗಿಸಿ ತಾಲಿಬಾನ್ ಬಂಡುಕೋರರು ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿ 20 ಮಂದಿ ಗಾಯಗೊಂಡಿದ್ದರು. ಆದರೆ ರಕ್ಷಣಾ ಸಚಿವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರು. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ಕು ತಾಲಿಬಾನಿಗಳನ್ನು ಅಫ್ಘಾನ್ ಸೇನೆ ಕೊಂದು ಹಾಕಿತ್ತು. ಈ ಘಟನೆಗೆ ಪ್ರತಿಕಾರವಾಗಿ ನಿನ್ನೆ ನಡೆದ ದಾಳಿಯಲ್ಲಿ ತಾಲಿಬಾನ್ ಪಡೆ ಸರ್ಕಾರಿ ಮಾಧ್ಯಮ ನಿರ್ದೇಶಕರಾದ ದವಾಖಾನ್ ಮೆನಾಪಾಲ್ ಅವರು ಹತ್ಯೆ ನಡೆಸಿದೆಯೆಂದು ಹೇಳಲಾಗುತ್ತಿದೆ



Join Whatsapp