ಒಲಿಂಪಿಕ್ಸ್: 41 ವರ್ಷದ ಬಳಿಕ ಪದಕ ಗೆದ್ದ ಭಾರತದ ಹಾಕಿ ತಂಡ

Prasthutha|

ಟೋಕಿಯೋ, ಆ.5: ಭಾರತದ ಪುರುಷರ ಹಾಕಿ ತಂಡ 41 ವರ್ಷದ ಬಳಿಕ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದುಕೊಂಡಿದೆ. ಜರ್ಮನಿ ತಂಡವನ್ನು 5-4 ಅಂತರದಿಂದ ಸೋಲಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.

- Advertisement -

1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತ ತಂಡ ಆ ಬಳಿಕದ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಸತತವಾಗಿ ಸೋಲು ಕಾಣುತ್ತಲೇ ಬಂದಿತ್ತು. ಆದರೆ ಈ ಬಾರಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.

ಎರಡನೇ ಕ್ವಾರ್ಟರ್ ನಲ್ಲಿ 3-1 ಹಿನ್ನಡೆಯಲ್ಲಿದ್ದ ಭಾರತ ಆಕ್ರಮಣಕಾರಿ ಗೋಲ್ ಗಳ ಮೂಲಕ ಆಟದ ಗತಿಯನ್ನು ಬದಲಿಸಿತು. ಸತತ 4 ಗೋಲ್ ದಾಖಲಿಸುವ ಮೂಲಕ ಜರ್ಮನಿ ತಂಡವನ್ನು ಒತ್ತಡದಲ್ಲಿ ಸಿಲುಕುವಂತೆ ಮಾಡಿತು. ಭಾರತದ ಸಿಮ್ರನ್‍ಜಿತ್ ಸಿಂಗ್ 17ನೇ, 34ನೇ ಮತ್ತು ಹಾರ್ದಿಕ್ ಸಿಂಗ್ 27 ಹಾಗೂ ಹರ್ಮನ್‍ಪ್ರೀತ್ ಸಿಂಗ್ 29ನೇ, ರೂಪಿಂದರ್ ಸಿಂಗ್ 31ನೇ ನಿಮಿಷದಲ್ಲಿ ಗೋಲ್ ದಾಖಲಿಸಿದರು.

- Advertisement -

ಇನ್ನು ಮೂರನೇ ಕ್ವಾರ್ಟರ್ ನಲ್ಲಿ ಅರ್ಧ ಸಮಯದ ಅಂತ್ಯಕ್ಕೆ 31ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಲಾಭ ಪಡೆದ ರವೀಂದ್ರ ಪಾಲ್ ಗೋಲ್ ಮಾಡಿ 4-3ರ ಮುನ್ನಡೆ ತಂದರು. ಇದಾದ ಮೂರು ನಿಮಿಷದ ಬಳಿಕ ಸಿಮ್ರನ್‍ಜಿತ್ ಗೋಲ್ ಮಾಡಿ 5-3ರ ಮುನ್ನಡೆ ಕಾಯ್ದುಕೊಂಡರು.



Join Whatsapp