ತರಬೇತಿಯಲ್ಲಿದ್ದ ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮೇಲೆ ಅತ್ಯಾಚಾರ ಯತ್ನ: ಪಿ ಎಸ್ ಐ ಅಮಾನತು

Prasthutha|

ಮೆಹಬೂಬಾಬಾದ್, ಆ.3:  ತರಬೇತಿಯಲಿದ್ದ ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮೇಲೆ ಅತ್ಯಾಚಾರ ಯತ್ನ ಆರೋಪಕ್ಕೆ ಸಂಬಂಧಿಸಿದಂತೆ ಶ್ರೀನಿವಾಸರೆಡ್ಡಿ ಎಂಬ ಎಸ್ ಐ ಅನ್ನು ತೆಲಂಗಾಣದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

- Advertisement -

ಈ ಘಟನೆ ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರೂ ಒಂದೇ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಮಹಿಳೆಯು ಪ್ರೊಬೆಷನರಿ ಪಿ ಎಸ್ ಐ ಆಗಿ ಕರ್ತವ್ಯದಲ್ಲಿದ್ದರು. ವಾರಂಗಲ್ ಪೊಲೀಸ್ ಕಮೀಷನರ್ ತರುಣ್ ಜೋಷಿಗೆ ಮಹಿಳೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಸೋಮವಾರ ರಾತ್ರಿ ಬೆಲ್ಲದ ಉಗ್ರಾಣದ ಮೇಲೆ ದಾಳಿ ನಡೆಸಬೇಕೆಂದು ತನ್ನ ಖಾಸಗಿ ವಾಹನದಲ್ಲಿ ಮಹಿಳಾ ಸಹೋದ್ಯೋಗಿಯನ್ನು ಕರೆದೊಯ್ದಿದ್ದ ಶ್ರೀನಿವಾಸ ರೆಡ್ಡಿ ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದಾನೆ.

- Advertisement -

ಮಹಿಳಾ ಪಿ ಎಸ್ ಐ ಈ ವೇಳೆ ತೀವ್ರ ಪ್ರತಿರೋಧ ತೋರಿದ ಕಾರಣದಿಂದಾಗಿ ಆರೋಪಿ ಶ್ರೀನಿವಾಸರೆಡ್ಡಿ ಮಹಿಳೆಯನ್ನು ಆಕೆಯ ನಿವಾಸದ ಬಳಿ ತಂದು ಬಿಟ್ಟಿದ್ದಾನೆ. ಸದ್ಯಕ್ಕೆ ಮಹಿಳೆಯ ದೂರು ಆಧರಿಸಿ, ಆರೋಪಿ ಶ್ರೀನಿವಾಸರೆಡ್ಡಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.



Join Whatsapp